ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕೊನೆಯದಾಗಿ 22 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದು, ತಮ್ಮ ರಾಜಕೀಯ ಭವಿಷ್ಯ ನಿರ್ಧರಿಸಿಕೊಳ್ಳಲು ಮುಂದಾಗಿದ್ದಾರೆ.
ಪ್ರತಾಪ್ಸಿಂಹ ಸೇರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳ ಸ್ಪರ್ಧೆ - undefined
ರಾಜ್ಯದಲ್ಲಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ 22 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
![ಪ್ರತಾಪ್ಸಿಂಹ ಸೇರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳ ಸ್ಪರ್ಧೆ](https://etvbharatimages.akamaized.net/etvbharat/images/768-512-2846170-395-b2becaa5-78b8-40ad-8a94-fcbce90e194c.jpg)
ಮಾ.19ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮಾ.26ರವರೆಗೆ ಒಟ್ಟು 30 ಮಂದಿ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 5 ಮಂದಿ ನಾಮಪತ್ರ ತಿರಸ್ಕೃತಗೊಂಡರೇ, ಮೂರು ಮಂದಿ ವಾಪಸ್ ಪಡೆದುಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್, ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ ಅಭ್ಯರ್ಥಿ ಅಯೂಬ್ ಖಾನ್, ಉತ್ತಮ ಪ್ರಜಾಕೀಯ ಪಾರ್ಟಿಯ ವಿ ಆಶಾರಾಣಿ, ಕರ್ನಾಟಕ ಪ್ರಜಾ ಪಾರ್ಟಿ(ರೈತ ಪರ್ವ)ಯಿಂದ ಪಿ.ಕೆ.ಬಿದ್ದಪ್ಪ, ಎಸ್‌ಯುಸಿಐನ ಪಿ.ಎಸ್.ಸಂಧ್ಯಾ, ಪಕ್ಷೇತರ ಅಭ್ಯರ್ಥಿಗಳಾಗಿ ಎಂ.ಆನಂದ್‌ಕುಮಾರ್, ಎನ್.ಕೆ.ಕಾವೇರಿಯಮ್ಮ, ಬಿ.ಡಿ.ನಿಂಗಪ್ಪ, ಜಿ.ಎಂ.ಮಹದೇವ, ಆರ್.ಮಹೇಶ್, ರವಿ, ರಾಜು, ಜಿ.ಲೋಕೇಶ್ ಕುಮಾರ್, ಅಲಗೂಡು ಲಿಂಗರಾಜು, ವೆಂಕಟೇಶ್ ಡಿ.ನಾಯಕ, ಶ್ರೀನಿವಾಸಯ್ಯ, ಎಂ.ಜೆ.ಸುರೇಶ್‌ಗೌಡ, ಅಲಿ ಶಾನ್, ಕೆ.ಎಸ್.ಸೋಮಸುಂದರ ಕಣದಲ್ಲಿದ್ದಾರೆ.