ಕರ್ನಾಟಕ

karnataka

ETV Bharat / state

ಮೈಸೂರು ಶ್ರೀಚಾಮರಾಜೇಂದ್ರ ಮೃಗಾಲಯದ ಬ್ರಹ್ಮ ಇನ್ನಿಲ್ಲ... - Srichamarajendra Zoo in Mysore

ವೃದ್ಧಾಪ್ಯದಿಂದ 20 ವರ್ಷದ ಬ್ರಹ್ಮ ಎಂಬ ಹುಲಿ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಮೃತಪಟ್ಟಿದೆ.

dsdd
ಮೈಸೂರು ಮೃಗಾಲಯದಲ್ಲಿ 20 ವರ್ಷದ ಹುಲಿ ಸಾವು

By

Published : Jul 24, 2020, 7:45 PM IST

ಮೈಸೂರು: ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ವೃದ್ಧಾಪ್ಯದಿಂದ 20 ವರ್ಷದ ಬ್ರಹ್ಮ ಎಂಬ ಹುಲಿ ಕೊನೆಯುಸಿರೆಳೆದಿದೆ.

ಈ ಹುಲಿಯನ್ನು 2018ರ ಮಾಚ್೯ 18 ರಂದು ಕರ್ನಾಟಕ ಅರಣ್ಯ ಇಲಾಖೆಯಿಂದ ಮಾನವ-ಪ್ರಾಣಿ ಸಂಘರ್ಷ ಕಾರ್ಯಾಚರಣೆಯಡಿ ಮಡಿಕೇರಿ ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೆರಳು ಗ್ರಾಮದಿಂದ ಸೆರೆ ಹಿಡಿದು ಮೃಗಾಲಯಕ್ಕೆ ತರಲಾಗಿತ್ತು. ನಂತರ ಹುಲಿಯನ್ನು ಪುನರ್ವಸತಿ ಕೇಂದ್ರದಲ್ಲಿ‌ ಇರಿಸಲಾಗಿತ್ತು. ಬ್ರಹ್ಮ ಹುಲಿಯನ್ನು ದಿವಂಗತ ಯೋಗ ಗುರು ಬಿ.ಕೆ.ಎಸ್. ಐಯ್ಯಂಗಾರ್ ಅವರು ಹುಲಿಯನ್ನು ಜೀವಮಾನ ಪರ್ಯಂತ ದತ್ತು ಸ್ವೀಕರಿಸಿದ್ದರು.

ಮೃಗಾಲಯದಲ್ಲಿ ಸದ್ಯ 10 ಗಂಡು, 6 ಹೆಣ್ಣು ಹುಲಿಗಳಿವೆ. ಹುಲಿಯ ಮರಣಕ್ಕೆ ಮೃಗಾಲಯ ಪ್ರಾಧಿಕಾರ ಸಂತಾಪ ವ್ಯಕ್ತಪಡಿಸಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details