ಮೈಸೂರು:ಪ್ರತಿ ತಿಂಗಳು ಮೃಗಾಲಯದ ನಿರ್ವಹಣೆಗೆ 2 ಕೋಟಿ ಹಣ ಬೇಕು ಎಂದು ಮೃಗಾಲಯದ ಕಾರ್ಯನಿರ್ವಹಣಾ ಅಧಿಕಾರಿ ಅಜೀತ್ ಕುಲಕರ್ಣಿ ಹೇಳಿದ್ದಾರೆ.
ಮೈಸೂರು ಮೃಗಾಲಯದ ನಿರ್ವಹಣೆಗೆ ಪ್ರತಿ ತಿಂಗಳು 2 ಕೋಟಿ ಹಣ ಬೇಕು: ಅಜೀತ್ ಕುಲಕರ್ಣಿ - maintenance of the zoo
2002ರಿಂದ ಶ್ರೀ ಚಾಮರಾಜೇಂದ್ರ ಮೃಗಾಲಯವು ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು ಪ್ರಾಣಿಗಳ ಆಹಾರ ಹಾಗೂ ನಿರ್ವಹಣೆ, ನೌಕರರ ಸಂಬಳಕ್ಕೆ ಸುಮಾರು 2 ಕೋಟಿ ಹಣ ವ್ಯಯಿಸಬೇಕಿದೆ. ಲಾಕ್ಡೌನ್ ಹಿನ್ನೆಲೆ ಮೃಗಾಲಯ ಬಂದ್ ಆಗಿದ್ದು, ನಿರ್ವಹಣೆ ಕಷ್ಟವಿದೆ. ಹಾಗಾಗಿ ಸರ್ಕಾರದ ಸಹಾಯಕ್ಕಾಗಿ ಪತ್ರ ಬರೆದಿದ್ದೇವೆ ಎಂದು ಮೃಗಾಲಯದ ಕಾರ್ಯನಿರ್ವಹಣಾ ಅಧಿಕಾರಿ ಅಜೀತ್ ಕುಲಕರ್ಣಿ ತಿಳಿಸಿದರು.
ಇಂದು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಪ್ರಾಣಿಗಳ ದತ್ತು ಸ್ವೀಕಾರಕ್ಕೆ ಚೆಕ್ ಪಡೆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅಜೀತ್ ಕುಲಕರ್ಣಿ, 2002ರಿಂದ ಮೃಗಾಲಯವು ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ. ಪ್ರತಿ ತಿಂಗಳು ಪ್ರಾಣಿಗಳ ಆಹಾರ ಹಾಗೂ ನಿರ್ವಹಣೆ, ನೌಕರರ ಸಂಬಳಕ್ಕೆ ಸುಮಾರು 2 ಕೋಟಿ ಹಣ ವ್ಯಯಿಸಬೇಕಿದೆ ಎಂದು ತಿಳಿಸಿದರು.
ಲಾಕ್ಡೌನ್ ಹಿನ್ನೆಲೆ ಮೃಗಾಲಯ ಬಂದ್ ಆಗಿದ್ದು, ನಿರ್ವಹಣೆ ಕಷ್ಟವಿದೆ. ಹಾಗಾಗಿ ಸರ್ಕಾರದ ಸಹಾಯಕ್ಕಾಗಿ ಪತ್ರ ಬರೆದಿದ್ದೇವೆ. ಜೊತೆಗೆ ದಾನಿಗಳು ಸಹ ಹೆಚ್ಚು-ಹೆಚ್ಚು ಪ್ರಾಣಿಗಳನ್ನು ದತ್ತು ಪಡೆಯಬೇಕು. ಲಾಕ್ಡೌನ್ ಸಂದರ್ಭದಲ್ಲಿ ಮೃಗಾಲಯಕ್ಕೆ ಬರಲು ಸಾಧ್ಯವಾಗದಿರುವುದರಿಂದ ಆನ್ಲೈನ್ ಮೂಲಕ ದತ್ತು ಸ್ವೀಕಾರ ಮಾಡಬಹುದಾಗಿದೆ. ಮೃಗಾಲಯದಲ್ಲಿ 152 ಪ್ರಜಾತಿಯ ಪ್ರಾಣಿ-ಪಕ್ಷಿಗಳಿದ್ದು, ಇದರಲ್ಲಿ 1450ಕ್ಕೂ ಹೆಚ್ಚು ಪ್ರಾಣಿಗಳಿವೆ. ಇವುಗಳ ನಿರ್ವಹಣೆಗೆ ಪ್ರತಿ ತಿಂಗಳು 2 ಕೋಟಿ ಹಣ ಬೇಕು ಎಂದು ತಿಳಿಸಿದರು.