ಮೈಸೂರು: ಕ್ಷುಲ್ಲಕ ಕಾರಣಕ್ಕೆ ನಾಲ್ವರು ಯುವಕರ ಮಧ್ಯೆ ಗಲಾಟೆ ನಡೆದು, ಇಬ್ಬರಿಗೆ ಗಾಯವಾಗಿರುವ ಘಟನೆ ಮೈಸೂರಿನ ಶ್ರೀರಾಂಪುರ ಸಮೀಪದ ರಿಂಗ್ ರಸ್ತೆಯಲ್ಲಿ ನಡೆದಿದೆ. ಡಿ. ಸಾಲುಂಡಿ ನಿವಾಸಿಗಳಾದ ಭಾಸ್ಕರ್, ಶಶಿಕುಮಾರ್ ಗಾಯಗೊಂಡವರು. ಈ ಇಬ್ಬರಿಗೆ ಲಿಂಗಾಬುಧಿ ಪಾಳ್ಯದ ಆನಂದ್, ಅಭಿ ಡ್ರಾಗರ್ನಿಂದ ಚುಚ್ಚಿ ಪರಾರಿಯಾಗಿದ್ದಾರೆ.
ಗಾರೆ ಕೆಲಸ ಮಾಡಿಕೊಂಡಿದ್ದ ಆರೋಪಿ ಆನಂದ್ಗೂ ಗಾಯಗೊಂಡಿರುವ ಶಶಿಕುಮಾರ್ ಅವರ ಸೋದರ ಬಸವರಾಜುವಿಗೆ ವಿಜಯನಗರದಲ್ಲಿ ಸೋಮವಾರವಷ್ಟೇ ಗಲಾಟೆ ನಡೆದಿದೆ. ಈ ವೇಳೆ, ಆನಂದ್ ಮೇಲೆ ಬಸವರಾಜು ಹಲ್ಲೆ ನಡೆಸಿದ್ದ. ಈ ಕುರಿತು ವಿಚಾರಿಸಲು ಶಶಿಕುಮಾರ್ ಸ್ನೇಹಿತ ಭಾಸ್ಕರ್ನೊಂದಿಗೆ ರಿಂಗ್ರಸ್ತೆಗೆ ಬಂದಾಗ ಹೊಡೆದಾಟ ನಡೆದಿದೆ. ತಪ್ಪಿಸಿಕೊಳ್ಳಲು ದ್ವಿ ಚಕ್ರವಾಹನದಲ್ಲಿ ಭಾಸ್ಕರ್, ಶಶಿಕುಮಾರ್ ವೇಗವಾಗಿ ಬಂದಿದ್ದಾರೆ. ಮದ್ಯದಂಗಡಿ ಸಮೀಪ ಹೆಚ್ಚಿನ ಜನರಿದ್ದು, ಯಾರಾದರೂ ರಕ್ಷಣೆಗೆ ಬರಬಹುದು ಎಂದು ವಾಹನ ನಿಲ್ಲಿಸಿದ್ದಾರೆ.