ಮೈಸೂರು: ಈ ಬಾರಿ ಜಂಬೂಸವಾರಿ ಸಾಗುವ ಮಾರ್ಗದ ವರಗೆ ಭದ್ರತೆಯ ದೃಷ್ಟಿಯಿಂದ 190 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ನಗರ ಪೋಲಿಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದಸರಾ ಭದ್ರತೆಗೆ ಈ ಬಾರಿ 190 ಸಿಸಿಟಿವಿ ಅಳವಡಿಕೆ - mysore dasara latest news
ಇಂದು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅರಮನೆಯಿಂದ ಬನ್ನಿಮಂಟಪದ ವರೆಗೆ ಜಂಬೂಸವಾರಿ ಸಾಗುವ ಮಾರ್ಗದಲ್ಲಿ 190 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತಿರ್ಮಾನಿಸಲಾಗಿದೆ. ನಗರದಲ್ಲಿ ಈಗ 65 ಸಿಸಿಟಿವಿಗಳಿದ್ದು, ಅದರಲ್ಲಿ 59 ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿವೆ. ಉಳಿದವುಗಳನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದರು.
ಇಂದು ನಗರ ಪೋಲಿಸ್ ಕಮಿಷನರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅರಮನೆಯಿಂದ ಬನ್ನಿಮಂಟಪದ ವರೆಗೆ ಜಂಬೂಸವಾರಿ ಸಾಗುವ ಮಾರ್ಗದಲ್ಲಿ 190 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತಿರ್ಮಾನಿಸಲಾಗಿದೆ. ನಗರದಲ್ಲಿ ಈಗ 65 ಸಿಸಿಟಿವಿಗಳಿದ್ದು ಅದರಲ್ಲಿ 59 ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿವೆ. ಉಳಿದವುಗಳನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದರು.
ಈಗಾಗಲೇ ಕಾನ್ಸ್ಟೇಬಲ್ನಿಂದ ಪೊಲೀಸ್ ಕಮಿಷನರ್ ವರೆಗೆ ದಸರ ಜವಾಬ್ದಾರಿಗಳನ್ನು ವಹಿಸಲಾಗಿದೆ. ಅವರುಗಳು ಈಗಾಗಲೇ ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಜಂಬೂಸವಾರಿ ಸಾಗುವ ಅರಮನೆಯ ಮುಂಭಾಗದಲ್ಲಿ ಸರಿಯಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತೇವೆ . ಕೆಲವು ಕಲಾತಂಡಗಳು ಹೆಚ್ಚಿಗೆ ಬರುವುದರಿಂದ ಕೆಲವು ಸಂದರ್ಭಗಳಲ್ಲಿ ಜಂಬೂಸವಾರಿ ಹೊರಡುವ ವೇಳೆ ಗೊಂದಲವಾಗುತ್ತದೆ. ಆದ್ದರಿಂದ ಈ ಬಾರಿ 45 ರಿಂದ 50 ಕಲಾತಂಡ ಮತ್ತು ಟ್ಯಾಬ್ಲೊ ಹಾಗೂ ಕಲಾಕೃತಿ ಕೊಡಿ ಎಂದು ಕೇಳಿದ್ದೇವೆ. ಇವುಗಳನ್ನು ಜಾಸ್ತಿ ಕೊಟ್ಟಾಗ ಗೊಂದಲ ಜಾಸ್ತಿಯಾಗುತ್ತದೆ ಅದನ್ನು ನಿಭಾಯಿಸಿಕೊಂಡು ಹೋಗುವ ಯೋಜನೆಯನ್ನು ಕೂಡ ನಾವು ತಯಾರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.