ಮೈಸೂರು: ಮೂವರು ಕೆಎಸ್ಆರ್ಪಿ ಕಾನ್ಸ್ಟೇಬಲ್ ಸೇರಿದಂತೆ 18 ಮಂದಿಗೆ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಈ ಮೂಲಕ ಮೈಸೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.
ಮೈಸೂರಿನಲ್ಲಿ ಮೂವರು ಕೆಎಸ್ಆರ್ಪಿ ಸಿಬ್ಬಂದಿ ಸೇರಿ 18 ಮಂದಿಗೆ ಕೊರೊನಾ ದೃಢ - 18 corona infected in Mysore news
ಮೂವರು ಕೆಎಸ್ಆರ್ಪಿ ಕಾನ್ಸ್ಟೇಬಲ್ ಸೇರಿದಂತೆ 18 ಮಂದಿಗೆ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಮೈಸೂರಿನಲ್ಲಿ ಈ ವರೆಗೆ ಒಟ್ಟು 169 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು 112 ಜನ ಡಿಸ್ಚಾಜ್ ಆಗಿದ್ದಾರೆ.
ಮೂರು ಕೆಎಸ್ಆರ್ಪಿ, ಮೂರು ಐಎಲ್ಐ, ಒಂದು ಪ್ರಕರಣದ ಇತಿಹಾಸವನ್ನು ಪತ್ತೆ ಹಚ್ಚಲಾಗುತ್ತಿದೆ. ಇನ್ನುಳಿದ 11 ಸೋಂಕಿತರಿಗೆ ಅಂತರ್ ಜಿಲ್ಲೆ ಪ್ರವಾಸ ಹಾಗೂ ಸೋಂಕಿತರೊಂದಿಗಿನ ಪ್ರಥಮ ಸಂಪರ್ಕದಿಂದ ಕೊರೊನಾ ಬಂದಿದೆ.
ಮೈಸೂರಿನಲ್ಲಿ ಈ ವರೆಗೆ ಒಟ್ಟು 169 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು 112 ಜನ ಡಿಸ್ಚಾಜ್ ಆಗಿದ್ದಾರೆ. ಈ ವರೆಗೆ 16,561 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 16,414 ಮಂದಿಗೆ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.