ಕರ್ನಾಟಕ

karnataka

ETV Bharat / state

ಕೊರೊನಾಗೆ ನಡುಗಿದ ಸಾಂಸ್ಕೃತಿಕ ನಗರಿ..ಒಂದೇ ದಿನ 13 ಸಾವು, 372 ಮಂದಿಗೆ ಸೋಂಕು - Corona Latest News

ಮೈಸೂರಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು ಒಂದೇ ದಿನ 13 ಮಂದಿ ಸಾವನಪ್ಪಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ.

13 people died in Mysuru from corona today... same time 372 new cases confirmed
ಕೊರೊನಾಗೆ ನಡುಗಿದ ಸಾಂಸ್ಕೃತಿಕ ನಗರಿ..ಒಂದೇ ದಿನ 13 ಸಾವು, 372 ಮಂದಿಗೆ ಸೋಂಕು

By

Published : Aug 3, 2020, 8:41 PM IST

ಮೈಸೂರು: ಇಂದು ಸಾಂಸ್ಕೃತಿಕ ನಗರಿಯಲ್ಲಿ 372 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 13 ಜನ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ 372 ಮಂದಿಗೆ ಸೋಂಕು ದೃಢವಾಗುವುದರ ಮೂಲಕ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ಅಲ್ಲದೆ ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,192ಕ್ಕೆ ತಲುಪಿದೆ. ಇದಲ್ಲದೆ ಇಂದು 374 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದು, ಒಟ್ಟು ಜಿಲ್ಲೆಯಲ್ಲಿ 2,066 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದಂತಾಗಿದೆ. ಇನ್ನು 2,952 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೈಸೂರು ನಗರದಲ್ಲೆ ಅತೀ ಹೆಚ್ಚು ಸಾವು ಸಂಭವಿಸಿದ್ದು, ಸೋಂಕಿತರ ಸಂಖ್ಯೆಯೂ ಸಹ ಇಲ್ಲಿ ಏರಿಕೆಯಾಗುತ್ತಿದೆ.

ABOUT THE AUTHOR

...view details