ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಕೊರೊನಾಗೆ 11 ಮಂದಿ ಸಾವು: 110 ಮಂದಿಗೆ ಸೋಂಕು

ಮೈಸೂರು ಜಿಲ್ಲೆಯಲ್ಲಿ ಇಂದು 110 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ. 956 ಮಂದಿ ಕೋವಿಡ್​ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಯವರೆಗೆ ಕೊರೊನಾ 70 ರೋಗಿಗಳು ಸಾವನ್ನಪ್ಪಿದ್ದಾರೆ.

ಕೊರೊನಾ
ಕೊರೊನಾ

By

Published : Jul 19, 2020, 10:37 PM IST

ಮೈಸೂರು:ಜಿಲ್ಲೆಯಲ್ಲಿಂದು ಒಂದೇ ದಿನ ಕೊರೊನಾಗೆ 11 ಮಂದಿ ಮೃತಪಟ್ಟಿದ್ದು,110 ಮಂದಿಗೆ ಸೋಂಕು ತಗುಲಿದೆ.

ಮೀಡಿಯಾ ಬುಲೆಟಿನ್​

ಸಂಪರ್ಕಿತರಿಂದ 49, ಐಎಲ್​ಐಗೆ 38, ಪ್ರಯಾಣದ ಹಿನ್ನೆಲೆಯುಳ್ಳವರು 12, ಎಸ್​​ಎಆರ್​ಐ 7, ರೋಗ ಲಕ್ಷಣ ರಹಿತ 4 ಮಂದಿ ಸೇರಿದಂತೆ ಒಟ್ಟಾರೆ 110 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 23 ಮಂದಿ ಗುಣಮುಖರಾಗಿ ಡಿಸ್ಚಾಜ್೯ ಆಗಿದ್ದು, 11 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ.

ಮೀಡಿಯಾ ಬುಲೆಟಿನ್​

ಒಟ್ಟಾರೆ ಮೈಸೂರಿನಲ್ಲಿ 31419 ಮಂದಿಯ ಕೊರೊನಾ ಸ್ಯಾಂಪಲ್ ಟೆಸ್ಟ್ ಮಾಡಿದ್ದು, ಅದರಲ್ಲಿ 29,624 ಮಂದಿಯ ವರದಿ ನೆಗೆಟಿವ್ ಬಂದಿದೆ. ಕೊರೊನಾದಿಂದ ಈವರೆಗೆ 598 ಮಂದಿ ಡಿಸ್ಚಾಜ್೯ ಆಗಿದ್ದಾರೆ. 956 ಮಂದಿ ಕೋವಿಡ್​ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಕೊರೊನಾ 70 ರೋಗಿಗಳು ಸಾವನ್ನಪ್ಪಿದ್ದಾರೆ. ಇಂದು ಕಂಟೇನ್​ಮೆಂಟ್​​ ಝೋನ್​ಗಳ ಸಂಖ್ಯೆ 110 ಆಗಿದೆ.

ABOUT THE AUTHOR

...view details