ಮೈಸೂರು:ಕೆಲವು ದಿನಗಳಿಂದ ದ್ವಿಶತಕ ಬಾರಿಸುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು ಆ ಆತಂಕವನ್ನು ತುಸು ದೂರ ಮಾಡಿದೆ.
ಇಂದು 138 ಮಂದಿಗೆ ಕೊರೊನಾ ಸೋಂಕು ದೃಢಪಟ್ಟರೆ, 85 ಮಂದಿ ಗುಣಮುಖರಾಗಿ ಡಿಸ್ಚಾಜ್೯ ಆಗಿದ್ದಾರೆ. 10 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಸಾವಿಗೀಡಾದವರ ಸಂಖ್ಯೆ 223ಕ್ಕೆ ಏರಿಕೆಯಾಗಿದೆ.
ಮೈಸೂರಲ್ಲಿ ಕೊರೊನಾಗೆ 10 ಮಂದಿ ಬಲಿ...138 ಹೊಸ ಪ್ರಕರಣ ದಾಖಲು - Corona Latest News
138 ಮಂದಿಗೆ ಕೊರೊನಾ ಸೋಂಕು ದೃಢಪಟ್ಟರೆ, 85 ಮಂದಿ ಗುಣಮುಖರಾಗಿ ಡಿಸ್ಚಾಜ್೯ ಆಗಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಒಟ್ಟು 3,886 ಸಕ್ರಿಯ ಪ್ರಕರಣಗಳಿವೆ.
ಮೈಸೂರಲ್ಲಿ ಕೊರೊನಾಗೆ 10 ಮಂದಿ ಬಲಿ...138 ಹೊಸ ಪ್ರಕರಣ ದಾಖಲು
ಸಂಪರ್ಕದಿಂದ 39, ಪ್ರಯಾಣದ ಹಿನ್ನೆಲೆಯುಳ್ಳವರು 79, ಎಸ್ಎಆರ್ಐ 4, ಐಎಲ್ಐ 16 ಸೇರಿದಂತೆ 138 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮೈಸೂರಿನ ಒಟ್ಟಾರೆ 6,856 ಕೊರೊನಾ ಸೋಂಕಿತರ ಪೈಕಿ 2,747 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 3,886 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.