ಮೈಸೂರು: ನಂಜನಗೂಡು ನಂಜುಂಡೇಶ್ವರನಿಗೆ ಭಕ್ತರು 1.52 ಕೋಟಿ ರೂ. ಕಾಣಿಕೆ ಅರ್ಪಿಸಿದ್ದಾರೆ. ದೇವಾಲಯದಲ್ಲಿ ಶುಕ್ರವಾರ ರಾತ್ರಿವರೆಗೆ 30 ಹುಂಡಿಗಳನ್ನು ಎಣಿಕೆ ಮಾಡಲಾಗಿದ್ದು, ಒಂದೇ ತಿಂಗಳಲ್ಲಿ 1,52,75,136 ರೂ.ಸಂಗ್ರಹವಾಗಿದೆ. ಜೊತೆಗೆ 167 ಗ್ರಾಂ ಚಿನ್ನ, 9 ಕೆಜಿ 150 ಗ್ರಾಂ ಬೆಳ್ಳಿ, 64 ವಿದೇಶಿ ಕರೆನ್ಸಿ ಹುಂಡಿಯಲ್ಲಿ ಸಿಕ್ಕಿದೆ.
ಒಂದೇ ತಿಂಗಳಲ್ಲಿ ನಂಜುಂಡೇಶ್ವರನಿಗೆ 1.52 ಕೋಟಿ ರೂ. ಕಾಣಿಕೆ - ನಂಜುಂಡೇಶ್ವರ
ಐತಿಹಾಸಿಕ ನಂಜನಗೂಡು ನಂಜುಂಡೇಶ್ವರನಿಗೆ ಒಂದು ತಿಂಗಳಲ್ಲೇ 1.52 ಕೋಟಿ ರೂ. ಕಾಣಿಕೆಯನ್ನು ಭಕ್ತರು ಅರ್ಪಿಸಿದ್ದಾರೆ. ಹುಂಡಿಗಳಲ್ಲಿ ನಿಷೇಧಿತ ನೋಟುಗಳು ಪತ್ತೆಯಾಗಿಲ್ಲ.
ನಂಜನಗೂಡು ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ
ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ದೇವಸ್ಥಾನದ ಇಒ, ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು.
ಇದನ್ನೂ ಓದಿ:ಒಂದೇ ತಿಂಗಳಿನಲ್ಲಿ ಕೋಟ್ಯಧೀಶನಾದ ನಂಜನಗೂಡು ನಂಜುಂಡೇಶ್ವರ