ಮಂಡ್ಯ:ಗಾಣಾಳು ಫಾಲ್ಸ್‌ನಲ್ಲಿ ಕಾಲುಜಾರಿ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ಶಾಮ್ ವೆಲ್ (21) ಹಾಗೂ ಸಿಬಿಲ್ (22) ಎಂಬ ಯುವಕರು ಮೃತ ದುರ್ದೈವಿಗಳು. ವೀಕೆಂಡ್ ಹಿನ್ನೆಲೆ ಪಿಕ್‌ನಿಕ್‌ಗೆ ಬಂದಿದ್ದ ಸ್ನೇಹಿತರು, ಫಾಲ್ಸ್ ನೋಡಲು ನಿಂತಿದ್ದಾಗ ಕಾಲು ಜಾರಿ ಫಾಲ್ಸ್ ನೊಳಗೆ ಬಿದ್ದಿದಾರೆ ಎನ್ನಲಾಗ್ತಿದೆ.
ಗಾಣಾಳು ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಯುವಕರು ಸಾವು - mandya
ಅರಣ್ಯ ಪಾಲಕರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮೃತದೇಹಗಳನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಗಾಣಾಳು ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಯುವಕರು ಸಾವು
ಅರಣ್ಯ ಪಾಲಕರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮೃತದೇಹಗಳನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.