ಮಂಡ್ಯ:ಮಾನಸಿಕ ಅಸ್ವಸ್ಥನಿಗೆ ಯುಕವರ ಗುಂಪು ಸ್ನಾನ ಮಾಡಿಸಿ, ಶೇವಿಂಗ್-ಹೇರ್ ಕಟ್ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಮಾನವೀಯತೆ ಮೆರೆದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಬಳಿ ನಡೆದಿದೆ.
ಮಂಡ್ಯದಲ್ಲಿ ಮಾನಸಿಕ ಅಸ್ವಸ್ಥನಿಗೆ ಹೊಸ ರೂಪ ಕೊಟ್ಟ ಯುವಕರು! - ಮಾನಸಿಕ ಅಸ್ವಸ್ಥನನ್ನು ಶುಚಿಗೊಳಿಸಿದ ಯುವಕರು
ಒಂದು ವರ್ಷದಿಂದ ಸ್ನಾನವನ್ನೇ ಮಾಡದೆ ಓಡಾಡಿಕೊಂಡಿದ್ದ ಮಾನಸಿಕ ಅಸ್ವಸ್ಥನಿಗೆ ಕಿರಂಗೂರು ಗ್ರಾಮದ ಯುವಕರು ಸ್ನಾನ ಮಾಡಿಸಿ, ತಲೆಗೂದಲು ಕಟ್ ಮಾಡಿ ಶುಚಿಗೊಳಿಸಿ ಮಾನವೀಯತೆ ಮೆರೆದಿದ್ದಾರೆ.
ಮಾನಸಿಕ ಅಸ್ವಸ್ಥನಿಗೆ ಹೊಸ ರೂಪ ಕೊಟ್ಟ ಯುವಕರು
ಒಂದು ವರ್ಷದಿಂದ ಸ್ನಾನವನ್ನೇ ಮಾಡದೆ ಓಡಾಡಿಕೊಂಡಿದ್ದ ಮಾನಸಿಕ ಅಸ್ವಸ್ಥನಿಗೆ ಕಿರಂಗೂರು ಗ್ರಾಮದ ಆದರ್ಶ್, ನರಸಿಂಹ, ಸುರೇಶ್ ಹಾಗೂ ದರ್ಶನ್ ಯುವಕರು ಸ್ನಾನ ಮಾಡಿಸಿ, ತಲೆಗೂದಲು ಕಟ್ ಮಾಡಿ ಶುಚಿಗೊಳಿಸಿ ಮಾನವೀಯತೆ ತೋರಿದ್ದಾರೆ.
ಮುಂಜಾನೆ ವೇಳೆ ಅನಾಥ ಮಾನಸಿಕ ಅಸ್ವಸ್ಥನನ್ನು ಕಂಡ ಸ್ನೇಹಿತರ ಗುಂಪು, ಮೊದಲು ಅವನನ್ನು ಶುಚಿಗೊಳಿಸಿದ್ದಾರೆ. ನಂತರ ಆತನಿಗೆ ಹೊಸ ಬಟ್ಟೆ ತೊಡಿಸಿ ಹೊಸ ವ್ಯಕ್ತಿಯನ್ನಾಗಿ ರೂಪಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
TAGGED:
Mandya youth social services