ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ವೈನ್ ಸ್ಟೋರ್ ಬಳಿ ಕತ್ತು ಕೊಯ್ದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಳಗೊಳದ ಸೀಬಯ್ಯನ ಮಂಟಿ ನಿವಾಸಿ ರವಿ(22) ಕೊಲೆಯಾದ ಯುವಕ. ಕೊಲೆಯಾದ ಯುವಕ ವೈನ್ಸ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಮಚ್ಚಿನಿಂದ ಕತ್ತು ಕೂಯ್ದು, ತಲೆ ಭಾಗಕ್ಕೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.