ಕರ್ನಾಟಕ

karnataka

ETV Bharat / state

ಐಪಿಎಲ್​ ಬೆಟ್ಟಿಂಗ್​ನಿಂದ ಯುವಕ ಆತ್ಮಹತ್ಯೆ? ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ.. - undefined

ಐಪಿಎಲ್​ ಬೆಟ್ಟಿಂಗ್​ ದಂಧೆಗೆ ಸಿಲುಕಿದ್ದ ಯುವಕ ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಆತ ತನ್ನ ಕಣ್ಣುಗಳನ್ನ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ಐಪಿಎಲ್​ ಬೆಟ್ಟಿಂಗ್​ನಿಂದ ಯುವಕ ಆತ್ಮಹತ್ಯೆ: ಕಣ್ಣು ದಾನ ಮಾಡಿ ಸಾವಿನಲ್ಲು ಸಾರ್ಥಕತೆ..

By

Published : May 11, 2019, 3:22 PM IST

ಮಂಡ್ಯ: ಸಾಲದ ಸುಳಿಗೆ ಸಿಲುಕಿ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವಿಗೀಡಾಗಿದ್ದು, ಸಾಯುವ ಮುನ್ನ ತನ್ನ ಕಣ್ಣುಗಳನ್ನು ದಾನ ಮಾಡುವಂತೆ ತಿಳಿಸಿದ್ದಾನೆ.

ಕಣ್ಣುಗಳನ್ನ ದಾನ ಮಾಡಿದ ಲೋಕೇಶ್​

ಕಳೆದ ಒಂದು ವಾರದ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಬೋವಿ ಕಾಲೊನಿಯ ಲೋಕೇಶ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾನೆ. ಸಾಯುವ ಮುನ್ನ ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಲೊಕೇಶ್​ ತಿಳಿಸಿದ್ದ ಎನ್ನಲಾಗಿದ್ದು, ಮಿಮ್ಸ್ ಆಡಳಿತ ಮಂಡಳಿ ಕಣ್ಣುಗಳನ್ನು ಪಡೆದುಕೊಂಡಿದೆ.

For All Latest Updates

TAGGED:

ABOUT THE AUTHOR

...view details