ಮಂಡ್ಯ:ನಗರದ ಕಲ್ಲಹಳ್ಳಿ ಬಡಾವಣೆಯ ರೈಲ್ವೆ ಹಳಿ ಸಮೀಪ ತಡರಾತ್ರಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ರಕ್ಷಿತ್ ಅಲಿಯಾಸ್ ರಕ್ಷಿ (21) ಎಂಬಾತ ಕೊಲೆಯಾಗಿರುವ ಯುವಕ.
ಈತ ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ನಿವಾಸಿಯಾಗಿದ್ದು, ನಿನ್ನೆ ತಡರಾತ್ರಿ ಕೊಲೆಯಾಗಿದ್ದಾನೆ. ಯುವಕನಿಗೆ ಫೋನ್ ಕರೆ ಮಾಡಿ ಕರೆಯಿಸಿಕೊಂಡ ದುಷ್ಕರ್ಮಿಗಳು ರಸ್ತೆಯಲ್ಲಿ ಅಟ್ಟಾಡಿಸಿ ಬರ್ಬರ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.