ಮಂಡ್ಯ:ಕೊರೊನಾ ಸೋಂಕಿತನೋರ್ವ ಗುಣಮುಖನಾಗಿದ್ದು, ಬಡಾವಣೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಜೊತೆಗೆ ಅಲ್ಲಿನ ನಿವಾಸಿಗಳು ಆರತಿ ಬೆಳಗಿ ಯುವಕನನ್ನು ಸ್ವಾಗತಿಸಿದ ಘಟನೆ ಸ್ವರ್ಣಸಂದ್ರ ಬಡಾವಣೆಯಲ್ಲಿ ನಡೆದಿದೆ.
ಕೊರೊನಾ ಗೆದ್ದು ಬಂದ ಮಂಡ್ಯ ಯುವಕನಿಗೆ ವಿಶೇಷವಾಗಿ ಸ್ವಾಗತಿಸಿದ ಬಡಾವಣೆ ನಿವಾಸಿಗಳು - mandya latest news
ಸ್ವರ್ಣಸಂದ್ರ ಬಡಾವಣೆಯ ಯುವಕನೋರ್ವ ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖನಾಗಿ ಇಂದು ಮನೆ ಸೇರಿದ್ದಾನೆ. ಯುವಕ ಮನೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಆರತಿ ಬೆಳಗಿದರೆ, ಸುತ್ತಮುತ್ತಲಿನ ಜನರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
![ಕೊರೊನಾ ಗೆದ್ದು ಬಂದ ಮಂಡ್ಯ ಯುವಕನಿಗೆ ವಿಶೇಷವಾಗಿ ಸ್ವಾಗತಿಸಿದ ಬಡಾವಣೆ ನಿವಾಸಿಗಳು Yong man Cure from corona infection in Mandya](https://etvbharatimages.akamaized.net/etvbharat/prod-images/768-512-6973602-thumbnail-3x2-ctd.jpg)
ಕೊರೊನಾ ಗೆದ್ದು ಬಂದ ಮಂಡ್ಯ ಯುವಕನಿಗೆ ವಿಶೇಷ ಸ್ಬಾಗತ
ಕೊರೊನಾ ಗೆದ್ದು ಬಂದ ಮಂಡ್ಯ ಯುವಕನಿಗೆ ವಿಶೇಷ ಸ್ವಾಗತ
ಜುಬಿಲಂಟ್ ಕಾರ್ಖಾನೆ ಕಾರ್ಮಿಕ ಕೊರೊನಾ ಸೋಂಕು ತಗುಲಿ ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದು, ಸದ್ಯ ಗುಣಮುಖನಾಗಿದ್ದಾನೆ. ಇಂದು ಯುವಕ ಮನೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಆರತಿ ಬೆಳಗಿದರೆ, ಸುತ್ತಮುತ್ತಲಿನ ಜನರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ತಮ್ಮ ಬಡಾವಣೆಯ ಯುವಕ ಗುಣಮುಖನಾಗಿ ಬಂದಿದ್ದಕ್ಕೆ ಸ್ಚರ್ಣಸಂದ್ರ ಬಡಾವಣೆ ನಿವಾಸಿಗಳು ಸಂತಸಗೊಂಡಿದ್ದಾರೆ.