ಕರ್ನಾಟಕ

karnataka

ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರಿಗೆ ಯೋಗಾಭ್ಯಾಸ.. ಮನೋಸ್ಥೈರ್ಯ ಹೆಚ್ಚಳಕ್ಕೆ ಸಹಾಯ..

By

Published : May 1, 2021, 6:58 PM IST

ಸೋಂಕಿತರು ಕೊರೊನಾದಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಹೀಗಾಗಿ, ಯೋಗ ಮಾಡುವುದು ಅವರ ಮನೋಸ್ಥೈರ್ಯ ಹಾಗೂ ಉತ್ಸಾಹ ಹೆಚ್ಚಿಸಲು ಸಹಕಾರಿಯಾಗಲಿದೆ..

yoga training to corona patients in covid care enter
yoga training to corona patients in covid care enter

ಮಂಡ್ಯ :ಕೊರೊನಾ ಸೋಂಕಿತರ ಮನೋಬಲ ಹೆಚ್ಚಿಸಲು ನಾಗಮಂಗಲ ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರಿಗೆ ಯೋಗಾಭ್ಯಾಸ ನಡೆಸಲಾಗುತ್ತಿದೆ.

'ನನ್ನ ಆರೋಗ್ಯ ನನ್ನ ಯೋಗಾಭ್ಯಾಸ ಸಂಸ್ಥೆ' ಮುಖ್ಯಸ್ಥ ಮಧುಗೌಡ ನೇತೃತ್ವದಲ್ಲಿ ಯೋಗಾಭ್ಯಾಸ ತರಬೇತಿ ನೀಡಲಾಗುತ್ತಿದೆ. ಸೋಂಕಿತರನ್ನ 3-4 ಬ್ಯಾಚ್‌ಗಳನ್ನಾಗಿ ವಿಂಗಡಿಸಿ ನಿತ್ಯ ಯೋಗಾಭ್ಯಾಸ ಮಾಡಿಸಲಾಗುತ್ತಿದೆ‌.

ಸೋಂಕಿತರಿಗೆ ಯೋಗಾಭ್ಯಾಸ..

ಸೋಂಕಿತರು ಕೊರೊನಾದಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಹೀಗಾಗಿ, ಯೋಗ ಮಾಡುವುದು ಅವರ ಮನೋಸ್ಥೈರ್ಯ ಹಾಗೂ ಉತ್ಸಾಹ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಕೋವಿಡ್-19 ಸೆಂಟರ್​ಗಳಲ್ಲಿ ಸೋಂಕಿತರಿಗೆ ಸೂರ್ಯ ನಮಸ್ಕಾರ, ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಓಂಕಾರ ಉಪಾಸನೆ ಜತೆಗೆ ಸೋಂಕಿತರಲ್ಲಿ ಆತ್ಮಬಲ, ಮನೋಸ್ಥೈರ್ಯ, ದೈಹಿಕ ಬಲ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ABOUT THE AUTHOR

...view details