ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯ ಪ್ರಭಾವ ತೀವ್ರವಾಗಿರುವ ಹಿನ್ನೆಲೆ ಜಿಲ್ಲೆ ಸರ್ವೇಕ್ಷಣ ಘಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೊರೊನಾ ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸಲಾಯಿತು.
ಮಂಡ್ಯ:ಕೊರೊನಾ ಸೋಂಕಿತರಿಗೆ ಆತ್ಮಬಲ ತುಂಬಲು ಯೋಗಾಭ್ಯಾಸ - ಮಂಡ್ಯದಲ್ಲಿ ಕೊರೊನಾ
ಕೊರೊನಾ ಸೋಂಕಿತರಿಗೆ ಆತ್ಮಬಲ ತುಂಬುವ ಸಲುವಾಗಿ ಮಂಡ್ಯದ ಕೋವಿಡ್ ಕೇರ್ ಸೆಂಟರ್ಗಳಲ್ಲಿ ನಿತ್ಯ ಯೋಗ ಶಿಕ್ಷಕ ಬಾನು ಕುಮಾರ್ ಯೋಗಭ್ಯಾಸ ಮಾಡಿಸುತ್ತಿದ್ದಾರೆ.
ಕೊರೊನಾ ಸೋಂಕಿತರಿಗೆ ಆತ್ಮಬಲ ತುಂಬಲು ಯೋಗಭ್ಯಾಸ
ನಿತ್ಯ ಜಿಲ್ಲೆಯ ಕೋವಿಡ್ ಸೆಂಟರ್ಗಳಲ್ಲಿ ಯೋಗ ಶಿಕ್ಷಕ ಕೆ.ಎಸ್. ಬಾನು ಕುಮಾರ್ರಿಂದ ಯೋಗ್ಯಭ್ಯಾಸ ಮಾಡಿಸಲಾಗುತ್ತಿದೆ. ಕೋವಿಡ್-19 ಸೆಂಟರ್ಗಳಲ್ಲಿ ಸೋಂಕಿತರಿಗೆ ಸೂರ್ಯ ನಮಸ್ಕಾರ, ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಓಂಕಾರ ಉಪಾಸನೆ ಜತೆಗೆ ಸೋಂಕಿತರಲ್ಲಿ ಆತ್ಮಬಲ, ಮನೋಸ್ಥೈರ್ಯ, ದೈಹಿಕ ಬಲ ಹೆಚ್ಚಿಸುವಂತಹ ಕೆಲಸ ಮಾಡಿದ ಯೋಗ ಮಾಡಿಸಲಾಗುತ್ತಿದೆ.
ಕೋವಿಡ್ ಸೋಂಕಿತರು ಶೀಘ್ರವಾಗಿ ಗುಣಮುಖರಾಗುವಂತೆ ನಿತ್ಯ ಯೋಗಾಭ್ಯಾಸ ನಡೆಸಲಾಗುತ್ತಿದ್ದು, ಯೋಗ ಶಿಕ್ಷಕ ಬಾನು ಕುಮಾರ್ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.