ಮಂಡ್ಯ: ಸರ್ಕಾರಿ ಜಾಗದಲ್ಲಿದ್ದ ಶೌಚಾಲಯ ತೆರವು ಕಾರ್ಯಾಚರಣೆ ವೇಳೆ ಮಹಿಳೆಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಳವಳ್ಳಿ ತಾಲೂಕಿನ ಅಮೃತೇಶ್ವರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶೌಚಾಲಯ ತೆರವಿಗೆ ವಿರೋಧ: ಸೀಮೆಎಣ್ಣೆ ಸುರಿದು ಮಹಿಳೆಯಿಂದ ಆತ್ಮಹತ್ಯೆ ಯತ್ನ - ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ
ಸರ್ಕಾರಿ ಜಾಗದಲ್ಲಿದ್ದ ಶೌಚಾಲಯ ತೆರವಿಗೆ ತಾಲೂಕು ಆಡಳಿತ ಮುಂದಾದಾಗ ಮಹಿಳೆಯೊಬ್ಬರು ಆತ್ಮಹತ್ಯೆ ಯತ್ನದ ಮೂಲಕ ಪ್ರತಿರೋಧ ಒಡ್ಡಿದರು.
ಮಂಡ್ಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಸುಜಾತ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ನಿನ್ನೆ ಬೆಳಗ್ಗೆ ಸರ್ಕಾರಿ ಜಾಗದಲ್ಲಿದ್ದ ಶೌಚಾಲಯ ತೆರವಿಗೆ ತಾಲೂಕು ಆಡಳಿತ ಮುಂದಾದಾಗ ಈಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದರು.