ಮಂಡ್ಯ:ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸುತ್ತಿದ್ದಾಗ ರೈತ ಮಹಿಳೆಗೆ ಹಾವು ಕಚ್ಚಿ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.
ಜಮೀನಿನಲ್ಲಿ ಹಾವು ಕಚ್ಚಿ ರೈತ ಮಹಿಳೆ ಸಾವು.. - ಹಾವು
ರೈತ ಮಹಿಳೆ ಸಾವಿತ್ರಮ್ಮ (50) ಸಾವನ್ನಪ್ಪಿರುವ ದುರ್ದೈವಿಯಾಗಿದ್ದು, ತಮ್ಮ ಇಪ್ಪತ್ತು ಗುಂಟೆ ಜಮೀನಿನಲ್ಲಿ ಭತ್ತದ ಬೆಳೆಗೆ ಬೆಳಗ್ಗಿನ ಜಾವ ನೀರು ಹಾಯಿಸಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಹಾವು ಕಚ್ಚಿ ರೈತ ಮಹಿಳೆ ಸಾವು
ರೈತ ಮಹಿಳೆ ಸಾವಿತ್ರಮ್ಮ (50) ಸಾವನ್ನಪ್ಪಿರುವ ದುರ್ದೈವಿ. ತಮ್ಮ ಇಪ್ಪತ್ತು ಗುಂಟೆ ಜಮೀನಿನಲ್ಲಿ ಭತ್ತದ ಬೆಳೆಗೆ ಬೆಳಗ್ಗಿನ ಜಾವ ನೀರು ಹಾಯಿಸಲು ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಜಮೀನಿನ ಬಳಿ ಗ್ರಾಮಸ್ಥರು ತೆರಳಿದ್ದಾಗ ಘಟನೆ ಗೊತ್ತಾಗಿದ್ದು, ಅಷ್ಟರಲ್ಲಿ ಮಹಿಳೆ ಸಾವಿಗೀಡಾಗಿದ್ದಳು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.