ಕರ್ನಾಟಕ

karnataka

ETV Bharat / state

ಕೊಂಡೋತ್ಸವ ನೋಡುವ ವೇಳೆ ಕುಸಿದ ತಾರಸಿ: ಮಹಿಳೆ ಮೃತ, 40ಕ್ಕೂ ಹೆಚ್ಚು ಮಂದಿಗೆ ಗಾಯ - ಮಂಡ್ಯದಲ್ಲಿ ತಾರಸಿ ಕುಸಿದು ದುರಂತ

ಮಂಡ್ಯದ ಮದ್ದೂರು ತಾಲೂಕಿನ ಹುಲಗೆರೆಪುರದಲ್ಲಿ ಕೊಂಡೋತ್ಸವ ವೇಳೆ ಮನೆಯ ಸಜ್ಜೆ ಕುಸಿದು ಮಹಿಳೆ ಮೃತಪಟ್ಟಿದ್ದು, ಮಕ್ಕಳು ಸೇರಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

woman-dies-after-falling-off-terrace-and-40-injured-in-mandy
ಕೊಂಡೋತ್ಸವ ನೋಡುವ ವೇಳೆ ಕುಸಿದ ತಾರಸಿ: ಮಹಿಳೆ ಮೃತ, 40ಕ್ಕೂ ಹೆಚ್ಚು ಮಂದಿಗೆ ಗಾಯ

By

Published : Mar 29, 2022, 11:12 AM IST

Updated : Mar 29, 2022, 12:33 PM IST

ಮಂಡ್ಯ: ದೇವರ ಕೊಂಡೋತ್ಸವ ವೇಳೆ ಮನೆಯ ಸಜ್ಜೆ ಕುಸಿದು ಮಹಿಳೆ ಮೃತಪಟ್ಟಿದ್ದು, ಮಕ್ಕಳು ಸೇರಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮದ್ದೂರು ತಾಲೂಕಿನ ಹುಲಗೆರೆಪುರದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಗಾಯಾಳುಗಳನ್ನು ಮಂಡ್ಯ ಜಿಲ್ಲಾಸ್ಪತ್ರೆ ಮತ್ತು ಮದ್ದೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದ್ದು, 10ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಹುಲಗೆರೆಪುರ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಕೊಂಡೋತ್ಸವ ನೋಡಲು ದೇವಾಲಯ ಸಮೀಪ ಮಾದೇಗೌಡ ಎಂಬುವರ ಮನೆ ತಾರಸಿ ಮೇಲೆ 70ಕ್ಕೂ ಹೆಚ್ಚು ಮಂದಿ ನಿಂತಿದ್ದರು. ಇದು 90 ವರ್ಷದ ಹಳೇ ಕಟ್ಟಡವಾಗಿದ್ದು, ಜನರ ಭಾರ ತಾಳಲಾರದೇ ತಾರಸಿ ಒಂದು ಭಾಗ ಕುಸಿದಿದೆ. ಪುಟ್ಟಲಿಂಗಮ್ಮ(50) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಮಕ್ಕಳ ಸ್ಥಿತಿ ಗಂಭೀರವಾಗಿದೆ.

ತಾರಸಿ ಕುಸಿದು ಮಹಿಳೆ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

ಜಿಲ್ಲಾಧಿಕಾರಿಗಳಾದ ಅಶ್ವತಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಮಂಚೇಗೌಡ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ:ರಸ್ತೆ ಬೀದಿಯಲ್ಲಿ ಮಲಗಿದ್ದ ಬಾಲಕಿ ಮೇಲೆ ಹರಿದ ಟೆಂಪೋ: ಏಳು ವರ್ಷದ ಶಿವನ್ಯ ಸಾವು

Last Updated : Mar 29, 2022, 12:33 PM IST

ABOUT THE AUTHOR

...view details