ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಪ್ರಿಯಕರನ ಜತೆಸೇರಿ ಗಂಡನ ಹತ್ಯೆ:  ಪೊಲೀಸ್‌ ವಿಚಾರಣೆಯಲ್ಲಿ ಚಾಲಾಕಿ ಪತ್ನಿ, ಪ್ರಿಯಕರನ ಕಪಟ ನಾಯಕ ಬಯಲು

ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಹತ್ಯೆಗೈದಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನ ಮಂಡ್ಯ ಪೊಲೀಸರು ಬಂಧಿಸಿದ್ದಾರೆ.

mandya
ಬಂಧಿತರು

By

Published : Jul 5, 2021, 4:21 PM IST

ಮಂಡ್ಯ:ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಉಸಿರುಗಟ್ಟಿಸಿ ಕೊಂದು ಹೃದಯಾಘಾತದ ಕಥೆ ಕಟ್ಟಿದ್ದ ಹೆಂಡತಿ ಹಾಗೂ ಆಕೆಯ ಪ್ರಿಯಕರನನ್ನು ಮಂಡ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಳೆದ ಜು.29ರಂದು ಮಂಡ್ಯದ ಗುತ್ತಲು ಬಡಾವಣೆಯಲ್ಲಿ ರಾತ್ರಿ ಮಲಗಿದ್ದಲ್ಲೇ ಅಲ್ತಾಫ್ ಮೆಹದಿ (56) ಮೃತಪಟ್ಟಿದ್ದರು. ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪತ್ನಿ ಸೈಯಿದಾ ರಿಜ್ವಾನಾ ಬಾನು (36) ಹಾಗೂ ದಾವಣಗೆರೆ ಜಿಲ್ಲೆಯ ಹರಿಹರ ನಿವಾಸಿ ರೆಹಮತ್ತುಲ್ಲಾ (36) ಕಥೆ ಕಟ್ಟಿದ್ದರು. ಆದ್ರೆ ಮಂಡ್ಯ ಪೊಲೀಸರು ಚಾಲಾಕಿ ನಾಟಕದ ಮಾತುಗಳನ್ನು ಹುಸಿಗೊಳಿಸಿ ಇಬ್ಬರನ್ನು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಮಾಹಿತಿ

ಘಟನೆಯ ಬಗ್ಗೆ ಮತ್ತಷ್ಟು ವಿವರ:

ಮಂಡ್ಯ ತಾಲೂಕಿನ ತಗ್ಗಳ್ಳಿ ಗ್ರಾಮದಲ್ಲಿರುವ ಪದವಿ ಪೂರ್ವ ಕಾಲೇಜನ ಉಪ ಪ್ರಾಂಶುಪಾಲರಾಗಿದ್ದ ಅಲ್ತಾಫ್‌ ಮೆಹದಿ ಅವರು ಸೈಯಿದಾ ರಿಜ್ವಾನಾ ಬಾನು ಅವರನ್ನು ವಿವಾಹವಾಗಿದ್ದರು. ಆದ್ರೆ ಸೈಯಿದಾ ರಿಜ್ವಾನಾ ಬಾನುಗೆ ದಾವಣಗೆರೆ ಜಿಲ್ಲೆಯ ಹರಿಹರದ ರೆಹಮತ್ತುಲ್ಲಾ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಇವರಿಬ್ಬರ ನಡುವೆ ಮಾತುಕತೆ ಮುಂದುವರೆದು ಪ್ರೀತಿಗೆ ತಿರುಗಿತ್ತು. ಅಲ್ಲದೇ ಕೆಲ ದಿನಗಳ ನಂತರ ಅನೈತಿಕ ಸಂಬಂಧ ಸಹ ಬೆಳೆದಿತ್ತು ಎನ್ನಲಾಗಿದೆ.

ಪ್ರಿಯತಮನಿಗಾಗಿ ಟೈಲ್ಸ್ ಅಂಗಡಿ:

ಸೈಯಿದಾ ಮಂಡ್ಯಕ್ಕೆ ತನ್ನ ಪ್ರಿಯಕರನನ್ನು ಕರೆಸಿಕೊಂಡಿದ್ದಲ್ಲದೇ ಆತನಿಗೆ ಟೈಲ್ಸ್ ಅಂಗಡಿಯೊಂದನ್ನು ತೆರೆದು ವ್ಯವಹಾರ ನಡೆಸಲು ಸಹಾಯ ಮಾಡಿದ್ದಾಳೆ. ಅದೇ ಟೈಲ್ಸ್ ಅಂಗಡಿಗೆ ಕೆಲಸಕ್ಕೆ ಹೋಗುವ ನೆಪದಲ್ಲಿ ರೆಹಮತ್ತುಲ್ಲಾ ಜೊತೆ ಕಾಮದಾಟ ಆಡುತ್ತಿದ್ದಳು. ವಿಷಯ ತಿಳಿದು ಹಲವು ಬಾರಿ ರಾಜಿ-ಪಂಚಾಯಿತಿ ಸಹ ನಡೆದಿದೆ. ಆದ್ರೆ ಯಾವುದನ್ನುೂ ಲೆಕ್ಕಿಸದೆ ಪ್ರಿಯಕರನ ಜೊತೆ ಸಂಬಂಧ ಮುಂದುವರೆಸಿದ್ದ ಪತ್ನಿ ಮೇಲೆ ಪತಿ ಅಲ್ತಾಪ್‌ ಮೆಹದಿ, ನನ್ನ ಮನೆಗೆ ವ್ಯಕ್ತಿಯೊಬ್ಬ ಬರುತ್ತಿದ್ದು, ಆತನ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರೆು.

ಪೊಲೀಸರಿಗೆ ದೂರು ನೀಡಿದ ವಿಷಯ ತಿಳಿದ ಬಾನು ತನ್ನ ಪ್ರಿಯಕರ ರೆಹಮತ್ತುಲ್ಲಾಗೆ ದೂರವಾಣಿ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಹಾಲ್‌ನಲ್ಲಿ ಮಲಗಿದ್ದ ಗಂಡನ ಮುಖದ ಮೇಲೆ ದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಎಂದಿನಂತೆ ತನ್ನ ಕೊಠಡಿಗೆ ಹೋಗಿ ಮಲಗಿದ್ದಾಳೆ.

ಮೈಮೆಲೆ ಗಾಯ ನೋಡಿ ದೂರು ನೀಡಿದ ಸಂಬಂಧಿಕರು:

ಬೆಳಗ್ಗೆ ಮಕ್ಕಳು ಹೊರಗೆ ಬಂದು ತಂದೆಯನ್ನು ಮಾತನಾಡಿಸಲು ಪ್ರಯತ್ನಿಸಿದ ವೇಳೆ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ರಿಜ್ವಾನಾಬಾನು ಮಕ್ಕಳಿಗೆ ಹೇಳಿದ್ದಾಳೆ. ಆದರೆ ಮೃತನ‌ ಮೇಲೆ ಗಾಯದ ಗುರುತುಗಳನ್ನು ಗಮನಿಸಿದ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶವವನ್ನು ವಶಕ್ಕೆ ಪಡೆದು ಪರೀಕ್ಷೆ ನಡೆಸಿದ್ದು, ಪರೀಕ್ಷಾ ವರದಿಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ಸೈಯಿದಾ ಬಾನುಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವಾದಿಸಿದ್ದಳು. ಬಳಿಕ ಪತಿ ನೀಡಿದ್ದ ದೂರನ್ನಾಧರಿಸಿ ರೆಹಮತ್ತುಲ್ಲಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬೆಳಕಿಗೆ ಬಂದಿದೆ.

ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:ಸಹಾಯದ ನೆಪದಲ್ಲಿ ಅತ್ಯಾಚಾರ: ವಿಡಿಯೋ ಸಮೇತ ದೂರಿನನ್ವಯ ಗೋಕಾಕ್‌ನಲ್ಲಿ ಆರೋಪಿ ಅರೆಸ್ಟ್

ABOUT THE AUTHOR

...view details