ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಕಾಡಾನೆಗಳ ದಾಳಿಯಿಂದ ಬೆಳೆ ನಾಶ - ಮಂಡ್ಯದಲ್ಲಿ ಕಾಡಾನೆಗಳು ದಾಳಿ,

ಮಂಡ್ಯ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಯಿಂದಾಗಿ ಹೀರೆ, ಸೌತೆ, ಟೊಮೆಟೊ ಬೆಳೆ ನಾಶವಾಗಿದೆ.

Wild elephant attack, Wild elephant attack on farm, Wild elephant attack on farm in Mandya, Mandya elephant news, ಕಾಡಾನೆಗಳು ಆಳಿ, ಕಾಡಾನೆಗಳು ದಾಳಿಯಿಂದ ಬೆಳೆ ನಾಶ, ಮಂಡ್ಯದಲ್ಲಿ ಕಾಡಾನೆಗಳು ದಾಳಿ, ಮಂಡ್ಯ ಕಾಡಾನೆ ಸುದ್ದಿ,
ಮಂಡ್ಯದಲ್ಲಿ ಕಾಡಾನೆ ದಾಳಿಯಿಂದ ಬೆಳೆ ನಾಶ

By

Published : Feb 26, 2021, 4:26 AM IST

ಮಂಡ್ಯ:ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಹೀರೆ, ಸೌತೆ, ಟೊಮೆಟೊ ಬೆಳೆಯನ್ನ ಕಾಡಾನೆಗಳು ತುಳಿದು, ತಿಂದು ಹಾಳು ಮಾಡುವ ಮೂಲಕ ರೈತರ ಬದುಕು ನಾಶ ಮಾಡಿದೆ.

ಮಂಡ್ಯದ ಮಳ್ಳವಳ್ಳಿ ತಾಲೂಕಿನ ಗೂಳಿಗೌಡನದೊಡ್ಡಿ ಶಿವಲಿಂಗಮ್ಮ ಎಂಬುವರಿಗೆ ಸೇರಿದ ಜಮೀನಿನಲ್ಲಿ ಏಳು ಕಾಡಾನೆಗಳು ಬೆಳೆಗಳನ್ನು ತಿಂದು, ತುಳಿದು ನಾಶ ಪಡಿಸಿವೆ.

ಶಿವಲಿಂಗಮ್ಮ ಮಾತನಾಡಿ, ನಾವು ವ್ಯವಸಾಯವನ್ನೆ ನಂಬಿಕೊಂಡಿದ್ದೇವೆ. ಈಗ ನಮ್ಮ ಜಮೀನಿನಲ್ಲಿ ಹೀರೆಗಿಡ, ಸೌತೆಗಿಡ ಹಾಗೂ ಟೊಮೆಟೊ ಬೆಳೆ ಬೆಳೆದಿದ್ದೇವು. ಶಿಂಶಾ ಕಾಡಿನಿಂದ ಬಂದ ಕಾಡಾನೆಗಳು ಎಲ್ಲವನ್ನೂ ನಾಶಪಡಿಸಿವೆ ಎಂದು ಅಳವು ತೋಡಿಕೊಂಡರು.

ಅರಣ್ಯ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details