ಕರ್ನಾಟಕ

karnataka

ETV Bharat / state

ಕಾಡಾನೆ ದಾಳಿ: 2 ಲಕ್ಷ ಮೌಲ್ಯದ ಬೆಳೆ ನಾಶ - undefined

ಮಳವಳ್ಳಿ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಬಾಳೆ ಮತ್ತು ರಾಗಿ ಬೆಳೆ ಜಮೀನಿನ ಮೇಲೆ ಕಾಡಾನೆಗಳು ದಾಳಿ ಮಾಡಿದ್ದು, ಸುಮಾರು 2 ಲಕ್ಷ ರೂಪಾಯಿಗೂ ಹೆಚ್ಚು ಬೆಳೆ ನಷ್ಟ ಉಂಟಾಗಿದೆ.

Mandya

By

Published : Jun 15, 2019, 8:07 AM IST

ಮಂಡ್ಯ:ಕಾಡಾನೆಗಳ ದಾಳಿಗೆ ಬಾಳೆ ಹಾಗೂ ರಾಗಿ ಬೆಳೆ ನಾಶವಾಗಿರುವ ಘಟನೆ‌ ಮಳವಳ್ಳಿ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಡಾನೆ ದಾಳಿಯಿಂದ ನಾಶವಾಗಿರುವ ಬಾಳೆ ಮತ್ತು ರಾಗಿ ಬೆಳೆ

ಬಸವರಾಜು ಎಂಬ ರೈತನಿಗೆ ಸೇರಿದ ಜಮೀನಿಗೆ ಕಾಡಾನೆಗಳು‌ ದಾಳಿ ಮಾಡಿದ್ದು, ಕಟಾವಿಗೆ ಬಂದಿದ್ದ ಬಾಳೆ ಹಾಗೂ ಅರ್ಧ ಎಕರೆಯಲ್ಲಿ ಹಾಕಲಾಗಿದ್ದ ರಾಗಿ ಬೆಳೆಯನ್ನು ನಾಶ ಮಾಡಿವೆ. ಬೆಳೆ ನಷ್ಟದಿಂದ ರೈತನಿಗೆ ಸುಮಾರು 2 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details