ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧ ಪಶ್ನಿಸಿದ ಪತ್ನಿಯನ್ನು ಕೊಂದೇಬಿಟ್ಟ ಪತಿ.. ಹೃದಯಾಘಾತದ ಕಥೆ ಕಟ್ಟಿದವ ಪರಾರಿ - wife murdered by husband in mandya

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಸಿಟ್ಟು-ಹೆಂಡತಿಯನ್ನು ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ- ಮಂಡ್ಯ ಜಿಲ್ಲೆಯಲ್ಲಿ ಪ್ರಕರಣ

wife-murdered-by-husband-in-mandya
ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೊಂದು ಮರ್ಡರ್..! ಪತ್ನಿಯನ್ನು ಕೊಲೆಗೈದ ಪಾಪಿ ಪತಿ

By

Published : Jul 7, 2022, 3:23 PM IST

ಮಂಡ್ಯ :ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕಾಗಿ ಗಂಡನೋರ್ವ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ದಾರುಣ ಪ್ರಕರಣ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಯೋಗಿತಾ(28) ಗಂಡನಿಂದ ಕೊಲೆಯಾದ ಗೃಹಿಣಿ, ರವಿ(37) ಕೊಲೆಗೈದ ಆರೋಪಿ ಎಂದು ತಿಳಿದುಬಂದಿದೆ.

ಗಂಡನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಯೋಗಿತಾ ಅವರು ಮಲಗಿದ್ದ ಸಂದರ್ಭದಲ್ಲಿ ಸೀರೆಯಿಂದ ಕುತ್ತಿಗೆಗೆ ಬಿಗಿದು ಪತಿ ಕೊಲೆ ಮಾಡಿದ್ದಾನೆ. ಬಳಿಕ ಕೊಲೆ ಪ್ರಕರಣ ಮುಚ್ಚಿಹಾಕಲು ಯೋಗಿತಾ ಸಂಬಂಧಿಕರಿಗೆ ಕರೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ರವಿ ತಿಳಿಸಿದ್ದಾನೆ. ಸದ್ಯ ಆರೋಪಿ ರವಿ ಪರಾರಿಯಾಗಿದ್ದಾನೆ.

ಕೊಲೆಗೈದು ಪರಾರಿಯಾಗಿರೋ ಆರೋಪಿ ಬಂಧನಕ್ಕೆ ಸಂಬಂಧಿಕರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ :ಬಾಲಕಿಯರ ಜೊತೆ ಅಶ್ಲೀಲ ವರ್ತನೆ: ಮಲಯಾಳಂ ನಟ ಶ್ರೀಜಿತ್​ ರವಿ ಬಂಧನ

ABOUT THE AUTHOR

...view details