ಮಂಡ್ಯ:ಪ್ರಿಯಕರನ ಜೊತೆ ವಿವಾಹೇತರ ಸಂಬಂಧ ಉಳಿಸಿಕೊಳ್ಳಲು ಪತ್ನಿಯೇ ಪತಿಯನ್ನು ಕೊಲೆಗೈದು, ನಾಲೆಗೆ ಹಾಕಿದ್ದ ಪ್ರಕರಣವನ್ನು ಬೇಧಿಸಿರುವ ಬಸರಾಳು ಪೊಲೀಸರು ಆರೋಪಿ ಮಹಿಳೆ ಸೇರಿದಂತೆ ಕೊಲೆಗೆ ಸಹಕಾರ ನೀಡಿದ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.
2019ರ ಸೆಪ್ಟಂಬರ್ 29ರಂದು ಬಸರಾಳು ಸಮೀಪದ ನಾಲೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಶವದ ಜಾಡು ಹಿಡಿದ ಪೊಲೀಸರು ಶವ ಕೆ.ಆರ್. ಪೇಟೆ ತಾಲೂಕಿನ ಸೊಳ್ಳೆಪುರ ಗ್ರಾಮದ ಜವರೇಗೌಡ ಎಂದು ಪತ್ತೆ ಮಾಡಿದ್ದರು.