ಮಂಡ್ಯ:ತನ್ನ ಪತ್ನಿಯೊಂದಿಗೆ ಸಹೋದರ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಅಣ್ಣನೇ ತಮ್ಮನನ್ನು ಹಾರೆಯಿಂದ ಇರಿದು ಕೊಲೆ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಕಟ್ಕೊಂಡ್ ಹೆಂಡ್ತಿ ಜತೆಗೇ ತಮ್ಮನ ಕಳ್ ಸಂಬಂಧ?.. ಪಾಂಡವಪುರದಲ್ಲಿ ಹಾರೆಯಿಂದ ಇರಿದು ಕೊಲೆಗೈದ ಅಣ್ಣ.. - ಪಾಂಡವಪುರ ಕ್ರೈಂ ಸುದ್ದಿ
ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆ ಅಣ್ಣನೇ ತಮ್ಮನನ್ನು ಹಾರೆಯಿಂದ ಇರಿದು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.
ಪತ್ನಿಯೊಂದಿಗೆ ಅನೈತಿಕ ಸಂಬಂಧ ಹಿನ್ನಲೆ ಅಣ್ಣನಿಂದ ತಮ್ಮನ ಕಗ್ಗೊಲೆ
ಮಹೇಂದ್ರ(41) ಅಣ್ಣನಿಂದ ಕೊಲೆಯಾದ ವ್ಯಕ್ತಿ. ಹಾಗೂ ಮಂಜುನಾಥ್ ಕೊಲೆ ಮಾಡಿದವ. ನಿನ್ನೆ ರಾತ್ರಿ ಇದೇ ವಿಚಾರವಾಗಿ ಇಬ್ಬರ ನಡುವೆ ಕಲಹ ನಡೆದಿದ್ದು, ತಮ್ಮ ಮಲಗಿದ್ದಾಗ ಅಣ್ಣ ಅವನನ್ನು ಹಾರೆಯಿಂದ ಇರಿದು ಕೊಂದಿದ್ದಾನೆ.ಇನ್ನು, ಘಟನಾ ಸ್ಥಳಕ್ಕಾಗಮಿಸಿದ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.