ಮಂಡ್ಯ : ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಗ್ರಾಮದಲ್ಲಿ ಕೈ ಮಗ್ಗದ ಮೂಲಕ ನೇಯ್ಗೆ ಮಾಡುವ ಸಾವಿರಾರು ಜನ ಕಾರ್ಮಿಕರು ಮತ್ತು ಮಾಲೀಕರು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಂಡ್ಯದಲ್ಲಿ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ನೇಕಾರರು
ಕೊಡಿಯಾಲ ಗ್ರಾಮದಲ್ಲಿ ಸುಮಾರು 600 ಮಗ್ಗದ ಯಂತ್ರಗಳಿವೆ. ದಿನ ಒಂದಕ್ಕೆ ಒಂದು ಮಗ್ಗದಿಂದ 3 ಸೀರೆಗಳನ್ನು ನೇಯ್ಗೆ ಮಾಡಲಾಗುತ್ತದೆ. ಮಗ್ಗವನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಇವರು ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಇಲ್ಲಿನ ಕೊಡಿಯಾಲ ಗ್ರಾಮದಲ್ಲಿ ಸುಮಾರು 600 ಮಗ್ಗದ ಯಂತ್ರಗಳಿವೆ. ದಿನ ಒಂದಕ್ಕೆ ಒಂದು ಮಗ್ಗದಿಂದ 3 ಸೀರೆಗಳನ್ನು ನೇಯ್ಗೆ ಮಾಡಲಾಗುತ್ತದೆ. ಮಗ್ಗವನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ನೇಕಾರರು ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಮಗ್ಗವನ್ನೇ ನಂಬಿಕೊಂಡಿದ್ದ ಕುಟುಂಬಗಳಿಗೆ ಸರ್ಕಾರ ತಲಾ ಎರಡು ಸಾವಿರ ರೂ. ಸಹಾಯ ಧನ ಘೋಷಣೆ ಮಾಡಿತ್ತು. ಆದರೆ ಇನ್ನೂ ಸರ್ವೆ ಕಾರ್ಯವೇ ಆರಂಭವಾಗಿಲ್ಲ. ನೀತಿ-ನಿಯಮಾವಳಿ ರೂಪಿಸಿಲ್ಲ. ಸರ್ಕಾರದ ಸಹಾಯ ಧನ ಸಿಗುತಯ್ತದೆಯೋ, ಇಲ್ಲವೋ ಎಂಬ ಅನುಮಾನ ಕಾರ್ಮಿಕರನ್ನು ಕಾಡುತ್ತಿದೆ. ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಬೇಕೆಂದು ನೇಕಾರರು ಒತ್ತಾಯಿಸಿದ್ದಾರೆ.