ಕರ್ನಾಟಕ

karnataka

ETV Bharat / state

ನಾವು ನಿಖಿಲ್ ಗೆಲುವಿಗಾಗಿ ಶ್ರಮಿಸಿದ್ದೇವೆ: ಶಿವರಾಮೇಗೌಡ - Shivaramegowda

ನನಗೆ ಚುನಾವಣೆಗೆ ನಿಲ್ಲುವ ಆಸೆ ಇಲ್ಲ. ಚುನಾವಣೆಗೆ ನಿಂತರೆ ನಾಗಮಂಗಲ, ಮಂಡ್ಯದಲ್ಲೇ ನಿಲ್ಲೋದು. ಕುಮಾರಸ್ವಾಮಿ, ದೇವೇಗೌಡರೇ ನಮ್ಮ ನಾಯಕರು ಎಂದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.

ನಾವು ನಿಖಿಲ್ ಗೆಲುವಿಗಾಗಿ ಶ್ರಮಿಸಿದ್ದೇವೆ:ಶಿವರಾಮೇಗೌಡ

By

Published : Sep 27, 2019, 6:21 PM IST

ಮಂಡ್ಯ: ಚುನಾವಣೆಯಲ್ಲಿನಿಖಿಲ್ ಕುಮಾರಸ್ವಾಮಿ ಗೆಲ್ಲಿಸಲು ಕಂಕಣ ಬದ್ಧವಾಗಿ ಹೋರಾಟ ಮಾಡಿದ್ದೇವೆ. ಮತದಾರರ ಮೇಲೆ ಆಣೆ ಮಾಡುವೆ. ನಾವು ನಿಖಿಲ್ ಗೆಲುವಿಗೆ ಶ್ರಮಿಸಿದ್ದೇವೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮಾಧ್ಯಮಗಳ ಮುಂದೆ ಪ್ರಮಾಣ ಮಾಡಿದರು.

ನಾವು ನಿಖಿಲ್ ಗೆಲುವಿಗಾಗಿ ಶ್ರಮಿಸಿದ್ದೇವೆ:ಶಿವರಾಮೇಗೌಡ

ನಾಗಮಂಗಲದಲ್ಲಿ ಮಾತನಾಡಿದ ಅವರು, ಕೆಲವು ಕಡೆ ಮಾತನಾಡುತ್ತಿದ್ದಾರೆ. ಆದರೆ ನಾವು ನಿಖಿಲ್ ಗೆಲುವಿಗಾಗಿ ಶ್ರಮಿಸಿದ್ದೇವೆ ಎಂದರು. ಲೀ ಮೆರೆಡಿಯನ್, ಏಟ್ರಿಯಾಕ್ಕೆ ನಾನು ಹೋಗುವುದು ಸಾಮಾನ್ಯ. ಅಲ್ಲೇ ನಾನು ಸ್ಪಷ್ಟನೆ ನೀಡಿದ್ದೇನೆ. ನಾನು ಜೆಡಿಎಸ್‌ನಲ್ಲೇ ಇರುವೆ. ಸಣ್ಣ ಪುಟ್ಟ ವ್ಯತ್ಯಾಸ ಇರುತ್ತದೆ. ನಾವೇ ಸರಿ ಮಾಡಿಕೊಳ್ಳುತ್ತೇವೆ ಅದಕ್ಕೆ ಊಹಾ ಪೋಹ ಬೇಡ ಎಂದರು.

ನನಗೆ ಚುನಾವಣೆಗೆ ನಿಲ್ಲುವ ಆಸೆ ಇಲ್ಲ. ಚುನಾವಣೆಗೆ ನಿಂತರೆ ನಾಗಮಂಗಲ, ಮಂಡ್ಯದಲ್ಲೇ ನಿಲ್ಲೋದು. ಕುಮಾರಸ್ವಾಮಿ, ದೇವೇಗೌಡರೇ ನಮ್ಮ ನಾಯಕರು. ನನಗೂ ಸುರೇಶ್ ಗೌಡರಿಗೂ ಭಿನ್ನಾಭಿಪ್ರಾಯಗಳು ಇಲ್ಲ. ದೊಡ್ಡ ಕೆಲಸ ಅವರು ಮಾಡಲಿ. ಸಣ್ಣ ಕೆಲಸ ನಾನು ಮಾಡುವೆ. ಜನರ ಸೇವೆ ಮಾಡೋಣ ಎಂದರು.

ನನ್ನ ಚುನಾವಣೆಯಲ್ಲಿ ಕಾಂಗ್ರೆಸ್​ನವರೂ ನನಗೆ ಸಪೋರ್ಟ್ ನೀಡಿದ್ದಾರೆ. ನಾನು ಜನತಾ ದಳದ ಸಕ್ರೀಯ ಕಾರ್ಯಕರ್ತ. ಕಾಂಗ್ರೆಸ್ ನಾಯಕರ ಜೊತೆ ಯಾವುದೇ ಚರ್ಚೆ ಮಾಡಿಲ್ಲ. ನಾನು ಸಾಮಾನ್ಯವಾಗಿ ಅಲ್ಲಿಗೆ ಹೋಗ್ತಾ ಇರ್ತಿನಿ ಎಂದರು ಸ್ಪಷ್ಟಪಡಿಸಿದರು.

ರೇವಣ್ಣ ಏನೇ ಮಾತನಾಡಿದರೂ ಸುಮ್ಮನೆ ಆಗ್ತೀನಿ. ಜೆಡಿಎಸ್‌ನಲ್ಲೇ ಇರುತ್ತೇನೆ. ಕಷ್ಟಕಾಲದಲ್ಲಿ ಬಿಟ್ಟು ಹೋದರೆ ನಮ್ಮಂತಹ ಮೂರ್ಖರಿಲ್ಲ. ನಾನು ಕಾಂಗ್ರೆಸ್ ಸೇರುವ ಪ್ರಮೆಯವೇ ಇಲ್ಲ. ಡಿಕೆಶಿ ನನ್ನ ಸಂಬಂಧಿ, ಬಂಧು, ಅವರಿಗೆ ತೊಂದರೆ ಆದಾಗ ಅವರ ಜೊತೆ ನಿಲ್ಲಬೇಕು ಎಂದು ಹೋಗಿದ್ದೆ. ಅವರ ಜೊತೆ ನಿಲ್ಲುವುದು ನಮ್ಮ ಧರ್ಮ. ನಾನು ಕೆ.ಆರ್.ಪೇಟೆಗೆ ಹೋಗಿ ಚುನಾವಣೆಗೆ ನಿಲ್ಲೋದಲ್ಲ. ಸೇವೆ ಮಾಡಲು ಬರುತ್ತಿದ್ದೇನೆ. ನನ್ನ ಸೇವೆ ಪಡೆಯಿರಿ ಎಂದು ತಿಳಿಸಿದರು.

ಆಗ ಬಿಜೆಪಿಗೆ ಹೋಗಬೇಕಾಗಿ ಬಂದಿತ್ತು. ಕಾಂಗ್ರೆಸ್ ಬಿಡಲು ಮಂಡ್ಯದ ನಾಯಕರೇ ಕಾರಣ. ಜಿಲ್ಲಾ ಕಾಂಗ್ರೆಸ್ ನಾಯಕರು ನಿಖಿಲ್‌ಗೆ ಸಪೋರ್ಟ್ ಮಾಡಿಲ್ಲ ಅನ್ನೋದು ಜಗತ್ತಿಗೆ ಗೊತ್ತಿದೆ. ಕಾಂಗ್ರೆಸ್ ಮುಖಂಡರು ನಿಖಿಲ್‌ಗೆ ಮತ ಹಾಕಲೇ ಇಲ್ಲ ಎಂದರು.

ಜಿಲ್ಲೆ ಸಮಸ್ಯೆ ಕುರಿತು ಎಚ್ಚರಿಕೆ: ಜಿಲ್ಲೆಯಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಸಕ್ಕರೆ ಕಂಪನಿಗಳು ಮುಚ್ಚಿ ಹೋಗಿವೆ. ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸಚಿವ‌ ಅಶೋಕ್​ಗೆ ವಿನಂತಿ ಕಬ್ಬು ಬೆಳೆಗಾರರ ಸಭೆ ಕರೆಯಬೇಕು. ಕಂಪನಿ ಮಾಲೀಕರಿಗೆ ಆದೇಶ ನೀಡಬೇಕು. ಕಬ್ಬು ಅರೆಯಲು ಸೂಚನೆ ನೀಡಬೇಕು. ತಕ್ಷಣ ಕಬ್ಬು ಅರೆಯಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು‌.

ABOUT THE AUTHOR

...view details