ಕರ್ನಾಟಕ

karnataka

ETV Bharat / state

ಮೀಸಲಾತಿ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಿರಲು ತೀರ್ಮಾನ: ಡಿಸಿಎಂ ಅಶ್ವತ್ಥ ನಾರಾಯಣ - ಮೀಸಲಾತಿ ಹೋರಾಟ ಕುರಿತು ಡಿಸಿಎಂ ಅಶ್ವತ್ಥ್​ ನಾರಾಯಣ ಹೇಳಿಕೆ

ಪ್ರಜಾಪ್ರಭುತ್ವದಲ್ಲಿ ಅವರವರ ಭಾವನೆ ವ್ಯಕ್ತಪಡಿಸಿದ್ದಾರೆ. ಸಂಪೂರ್ಣವಾಗಿ ಮೀಸಲಾತಿ ವಿಚಾರದಲ್ಲಿ ಯಾರ ಕೈವಾಡ ಇಲ್ಲ. ಹಾಗಾಗಿ ಇದರ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತವಲ್ಲ ಎಂದು ಡಿಸಿಎಂ ಅಶ್ವತ್ಥ​ ನಾರಾಯಣ ಹೇಳಿದರು.

we decided to not speak about reservation in so
ಡಿಸಿಎಂ

By

Published : Feb 19, 2021, 8:34 PM IST

Updated : Feb 20, 2021, 7:26 AM IST

ಮಂಡ್ಯ:ಮೀಸಲಾತಿ ಹೋರಾಟದ ಕುರಿತು ಸಾರ್ವಜನಿಕವಾಗಿ ಯಾರೂ ಮಾತನಾಡಬಾರದೆಂದು ಸರ್ಕಾರದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಡಿಸಿಎಂ ಅಶ್ವತ್ಥ​ ನಾರಾಯಣ ತಿಳಿಸಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇಂತಹ ವಿಚಾರಗಳ ಬಗ್ಗೆ ಸೂಕ್ತ ಕ್ರಮ ವಹಿಸುವ ಕೆಲಸ ಮಾಡುತ್ತದೆ. ಪ್ರಜಾಪ್ರಭುತ್ವದಲ್ಲಿ ಅವರವರ ಭಾವನೆ ವ್ಯಕ್ತಪಡಿಸಿದ್ದಾರೆ. ಸಂಪೂರ್ಣವಾಗಿ ಮೀಸಲಾತಿ ವಿಚಾರದಲ್ಲಿ ಯಾರ ಕೈವಾಡ ಇಲ್ಲ. ಈಗಾಗಿ ಬಹಳ ಸ್ಪಷ್ಟತೆ ಇದೆ. ಈ ವಿಚಾರ ವೈಜ್ಞಾನಿಕವಾಗಿ ಆಗುವ ವಿಚಾರ. ಹಾಗಾಗಿ ಇದರ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತವಲ್ಲ ಎಂದರು.

ಮೀಸಲಾತಿ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಿರಲು ತೀರ್ಮಾನ

ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗ್ತಾರೆ ಎಂಬ ವಿಚಾರವಾಗಿ ಮಾತನಾಡಿ, ಈ ವಿಚಾರ ಹೇಳುವಂತದ್ದಲ್ಲ. ಯಾರು ಸೇರ್ತಾರೆ ಎನ್ನುವ ಮಾಹಿತಿ ಹಂಚಿಕೊಳ್ಳಲು ಆಗುವುದಿಲ್ಲ. ಯಾರು ಬರ್ತಾರೆ ಅನ್ನೋದಕ್ಕೆ ಸಂಬಂಧಿಸಿದ ವ್ಯಕ್ತಿಗಳೇ ಉತ್ತರ ಹೇಳ್ತಾರೆ. ಇದರೆಲ್ಲದರ ಬಗ್ಗೆ ನಮ್ಮ ವರಿಷ್ಠರು, ರಾಜ್ಯಾಧ್ಯಕ್ಷರು ಹಾಗೂ ಸಿಎಂ ಚರ್ಚೆ ಮಾಡುತ್ತಾರೆ. ಈ ವಿಚಾರದಲ್ಲಿ ನಾನು ಹೆಚ್ಚು ಏನೂ ಹೇಳುವುದಿಲ್ಲ ಎಂದರು.

ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಮುಂದೂಡುವ ಪ್ರಶ್ನೆ ಇಲ್ಲ. ಸಂವಿಧಾನಾತ್ಮಕವಾಗಿ ಯಾವಾಗ ಚುನಾವಣೆ ನಡೆಯಬೇಕುಕಿದೆಯೋ, ಆ ಸಂದರ್ಭದಲ್ಲಿ ನಡೆಯಲಿವೆ. ಮುಂದೂಡುವ ಯಾವುದೇ ಪ್ರಯತ್ನವಿಲ್ಲ ಎಂದರು.

Last Updated : Feb 20, 2021, 7:26 AM IST

ABOUT THE AUTHOR

...view details