ಮಂಡ್ಯ: ಮಂಡ್ಯದ ಮನ್ಮುಲ್ನಲ್ಲಿ ನಡೆದಿದ್ದ ನೀರು ಮಿಶ್ರಿತ ಹಾಲು ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಾಥಮಿಕ ಮಾಹಿತಿ ಆಧರಿಸಿ ಕೇಸ್ಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಮನ್ಮುಲ್ನಲ್ಲಿ ನೀರು ಮಿಶ್ರಿತ ಹಾಲು ಪ್ರಕರಣ: ಅಜ್ಞಾತ ಸ್ಥಳದಲ್ಲಿ ಇಬ್ಬರ ವಿಚಾರಣೆ - Water Mixed into Milk
ಮಂಡ್ಯದ ಮನ್ಮುಲ್ನಲ್ಲಿ ನಡೆದಿದ್ದ ನೀರು ಮಿಶ್ರಿತ ಹಾಲು ಪ್ರಕರಣ ಭಾರಿ ಸದ್ದು ಮಾಡಿತ್ತು. ಅಂತೆಯೇ ಈಗ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
![ಮನ್ಮುಲ್ನಲ್ಲಿ ನೀರು ಮಿಶ್ರಿತ ಹಾಲು ಪ್ರಕರಣ: ಅಜ್ಞಾತ ಸ್ಥಳದಲ್ಲಿ ಇಬ್ಬರ ವಿಚಾರಣೆ ಮನ್ಮುಲ್ನಲ್ಲಿ ನೀರು ಮಿಶ್ರಿತ ಹಾಲು ಪ್ರಕರಣ: ಅಜ್ಞಾತ ಸ್ಥಳದಲ್ಲಿ ಇಬ್ಬರ ವಿಚಾರಣೆ](https://etvbharatimages.akamaized.net/etvbharat/prod-images/768-512-12612937-732-12612937-1627565699120.jpg)
ಮನ್ಮುಲ್ನಲ್ಲಿ ನೀರು ಮಿಶ್ರಿತ ಹಾಲು ಪ್ರಕರಣ: ಅಜ್ಞಾತ ಸ್ಥಳದಲ್ಲಿ ಇಬ್ಬರ ವಿಚಾರಣೆ
ಮದ್ದೂರು ತಾಲೂಕಿನ ಚಿಕ್ಕೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರವಿ ಹಾಗೂ ಮರಳಿಗ ಸಂಘದ ಕಾರ್ಯದರ್ಶಿ ರಮೇಶ್ ಎಂಬುವರನ್ನು ಸಿಒಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳಿಕ ಮದ್ದೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಹಿನ್ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ.