ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಸದ್ಯ ಜಲಾಶಯದಲ್ಲಿ 86.80 ಅಡಿ ನೀರು ಸಂಗ್ರಹವಿದೆ.
ಜಲಾಶಯದಲ್ಲಿ ಒಳಹರಿವಿನ ಪ್ರಮಾಣ 10,180 ಕ್ಯೂಸೆಕ್ ಇತ್ತು. ಈ ಪ್ರಮಾಣ 13,702ಕ್ಕೆ ಹೆಚ್ಚಾಗಿದೆ. 325 ಕ್ಯೂಸೆಕ್ ಹೊರ ಹರಿವಿದೆ. ರಾಜ್ಯದಲ್ಲೆಡೆ ತುಂತುರು ಮಳೆ ಸುರಿಯುತ್ತಿರುವ ಕಾರಣ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. 24 ಗಂಟೆಯೊಳಗೆ ಕೆಆರ್‌ಎಸ್ ಜಲಾಶಯಕ್ಕೆ 1.12 ಅಡಿ ನೀರು ಹರಿದು ಬಂದಿದೆ.
ಮಳೆ ಕೊರತೆ
ಜಿಲ್ಲೆಗೆ ಮುಂಗಾರು ಪ್ರವೇಶವಾಗಿದ್ದು, ರೈತರು ಕೃಷಿ ಕಾರ್ಯ ಆರಂಭಿಸಿದ್ದಾರೆ. ಆದರೆ ಕಳೆದೊಂದು ವಾರದಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ವಾಡಿಕೆಯಷ್ಟು ಮಳೆ ಸುರಿಯದ ಕಾರಣ ರೈತರು ಆತಂಕಗೊಂಡಿದ್ದಾರೆ. ಹೀಗಾಗಿ ಬೆಳೆಗಳಿಗೆ ಕೆಆರ್‌ಎಸ್ ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ.