ಕರ್ನಾಟಕ

karnataka

ETV Bharat / state

116 ಅಡಿ ತಲುಪಿದ ಕನ್ನಂಬಾಡಿ.. ಒಳಹರಿವು ಹೆಚ್ಚಳ, 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ.. - ಕೆಆರ್​ಎಸ್​ ಅಣೆಕಟ್ಟೆಯಿಂದ ನೀರು ಬಿಡುಗಡೆ

ಕೆಆರ್‌ಎಸ್‌ಗೆ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಅಣೆಕಟ್ಟೆಯಿಂದ ರಾತ್ರಿ 10 ಗಂಟೆಗೆ 1,06,594 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಮಧ್ಯರಾತ್ರಿ ವೇಳೆ ಇದು 1.70 ಲಕ್ಷ ಕ್ಯೂಸೆಕ್ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೆಆರ್​​ಎಸ್​​ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

By

Published : Aug 11, 2019, 1:45 AM IST

Updated : Aug 11, 2019, 1:28 PM IST

ಮಂಡ್ಯ: ರಾಜ್ಯಾದ್ಯಂತ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವು ಕಡೆ ಪ್ರವಾಹ ಭೀತಿ ಮನೆ ಮಾಡಿದೆ. ಇದೀಗ ಮಂಡ್ಯ ಸುತ್ತಮುತ್ತ ಮಳೆ ಹೆಚ್ಚಾಗಿದ್ದು ಕೆಆರ್‌ಎಸ್‌ಗೆ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಡ್ಯಾಂನಿಂದ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಕೆಆರ್​ಎಸ್​ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳ..

ಅಣೆಕಟ್ಟೆಯಿಂದ ರಾತ್ರಿ 10 ಗಂಟೆಗೆ 1,06,594 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಮಧ್ಯರಾತ್ರಿ ವೇಳೆ ಇದು 1.70 ಲಕ್ಷ ಕ್ಯೂಸೆಕ್ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣ 1,60,191 ಕ್ಯೂಸೆಕ್ ಇದ್ದು, ಕೆಆರ್​​​ಎಸ್​​ ಡ್ಯಾಂ 116.40 ಅಡಿಯಷ್ಟು ತುಂಬಿದೆ.

Last Updated : Aug 11, 2019, 1:28 PM IST

ABOUT THE AUTHOR

...view details