ಮಂಡ್ಯ: ಕಾವೇರಿ ಹಾಗೂ ಕಬಿನಿ ಜಲಾಶಯದಿಂದ ಜುಲೈ 28ರಂದು ನಾಲೆಗಳಿಗೆ ನೀರು ಬಿಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಪೌರಾಡಳಿತ ಸಚಿವ ನಾರಾಯಣಗೌಡ ಜಂಟಿಯಾಗಿ ಘೋಷಿಸಿದರು.
28ರಂದು ಕಾವೇರಿ, ಕಬಿನಿಯಿಂದ ನಾಲೆಗಳಿಗೆ ನೀರು: ಸಚಿವರ ಘೋಷಣೆ - ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
ಕಾವೇರಿ ಹಾಗೂ ಕಬಿನಿಯಿಂದ ಜುಲೈ 28ರಂದು ನಾಲೆಗಳಿಗೆ ನೀರು ಬಿಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಪೌರಾಡಳಿತ ಸಚಿವ ನಾರಾಯಣಗೌಡ ಜಂಟಿಯಾಗಿ ಘೋಷಿಸಿದರು.
ಕಾವೇರಿ ನೀರು ಸಲಹಾ ಸಮಿತಿ ಸಭೆ
ಕೆ.ಆರ್.ಎಸ್‌ನ ಕಾವೇರಿ ಸಭಾಂಗಣದಲ್ಲಿ ಕಾವೇರಿ ನೀರು ಸಲಹಾ ಸಮಿತಿ ಸಭೆಯ ನಂತರ ಮಾಹಿತಿ ನೀಡಿದ ಸಚಿವರು, ನಾಲೆ ಕಾಮಗಾರಿ ಶೀಘ್ರವಾಗಿ ಮುಗಿಯಲಿದೆ. ಹೀಗಾಗಿ, 28ರಿಂದ ನೀರು ಬಿಡಲಾಗುವುದು. ಸವಡೆಗಳ ನೇಮಕಾತಿ ಶೀಘ್ರವಾಗಿ ಮಾಡಲಾಗುವುದು. ಸಾವಿರಕ್ಕೂ ಹೆಚ್ಚು ಸವಡೆಗಳ ನೇಮಕಾತಿ ನಡೆಯಲಿದೆ. ವೇತನ ಸಮಸ್ಯೆಯೂ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.