ಕರ್ನಾಟಕ

karnataka

ETV Bharat / state

ಕೊರೊನಾ ವಿರುದ್ಧ ಸಮರ : ಮಂಡ್ಯ ಜಿಲ್ಲಾಡಳಿತದಿಂದ ಲಸಿಕಾ ಅಭಿಯಾನ - Mandya District adminitration covid vaccine campaign

ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಸ್ವಲ್ಪ ತಗ್ಗಿದೆಯಾದರೂ ನಿತ್ಯ ಸೋಂಕಿತರ ಸಂಖ್ಯೆ 400ರ ಸಮೀಪ ದಾಖಲಾಗುತ್ತಿವೆ. ಅದರಲ್ಲೂ ಹಳ್ಳಿಗಾಡಿನ ಪ್ರದೇಶಗಳಲ್ಲೇ ಹೆಚ್ಚು ಪಾಸಿಟಿವ್ ಕೇಸ್ ದಾಖಲಾಗುತ್ತಿವೆ. ಸದ್ಯ ಜಿಲ್ಲೆಯಲ್ಲಿ 4017 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಶೇ.70ರಷ್ಟು ಕೇಸ್‍ಗಳು ಗ್ರಾಮೀಣ ಪ್ರದೇಶಗಳಲ್ಲಿ ಇರುವುದು ಆತಂಕಕಾರಿ ವಿಷಯ..

mandya
ಮಂಡ್ಯ

By

Published : Jun 13, 2021, 10:48 PM IST

ಮಂಡ್ಯ: ಕೊರೊನಾ 2ನೇ ಅಲೆ ಹಳ್ಳಿ ಹಳ್ಳಿಗೂ ಹಬ್ಬಿದ್ದು, ಜನರ ನಿದ್ದೆಗೆಡಿಸಿದೆ. ಇನ್ನೊಂದೆಡೆ ಸೋಂಕಿತರು ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆ ಮಾಡುತ್ತಿರೋದ್ರಿಂದ ಸೋಂಕು ನಿಯಂತ್ರಣ ತರೋದಕ್ಕೆ ಕಷ್ಟವಾಗುತ್ತಿದೆ. ಈ ನಡುವೆ ಹಳ್ಳಿಗಳಲ್ಲಿ ಸೋಂಕು ತಡೆಯಲು ಪ್ರಯತ್ನ ಮಾಡುತ್ತಿರುವ ಮಂಡ್ಯ ಜಿಲ್ಲಾಡಳಿತ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ.

ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಮಾತನಾಡಿದ್ದಾರೆ

ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಸ್ವಲ್ಪ ತಗ್ಗಿದೆಯಾದರೂ ನಿತ್ಯ ಸೋಂಕಿತರ ಸಂಖ್ಯೆ 400ರ ಸಮೀಪ ದಾಖಲಾಗುತ್ತಿವೆ. ಅದರಲ್ಲೂ ಹಳ್ಳಿಗಾಡಿನ ಪ್ರದೇಶಗಳಲ್ಲೇ ಹೆಚ್ಚು ಪಾಸಿಟಿವ್ ಕೇಸ್ ದಾಖಲಾಗುತ್ತಿವೆ. ಸದ್ಯ ಜಿಲ್ಲೆಯಲ್ಲಿ 4017 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಶೇ.70ರಷ್ಟು ಕೇಸ್‍ಗಳು ಗ್ರಾಮೀಣ ಪ್ರದೇಶಗಳಲ್ಲಿ ಇರುವುದು ಆತಂಕಕಾರಿ ವಿಷಯ.

ಕೊರೊನಾ ಕಂಟ್ರೋಲ್ ಮಾಡುವ ಉದ್ದೇಶದಿಂದ ಸೋಂಕಿತರನ್ನು ಅಗತ್ಯವಿದ್ದರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದು. ಇಲ್ಲವಾದ್ರೆ ಕ್ವಾರಂಟೈನ್ ಕೇಂದ್ರದಲ್ಲಿ ಐಸೋಲೇಷನ್ ಮಾಡುವುದು ಸೇರಿ ಸೋಂಕಿತರ ಸಂಪರ್ಕಿತರಿಗೆ ಟೆಸ್ಟ್ ಮಾಡಲಾಗುತ್ತಿದೆ.

ಇದರೊಂದಿಗೆ ಮುಂದಿನ ವಾರದಿಂದ ಲಸಿಕೆ ಅಭಿಯಾನ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ತಂಡ ರಚಿಸಲಾಗುತ್ತಿದೆ. ಮೊದಲು ಆದ್ಯತೆ ಮೇರೆಗೆ ಲಸಿಕೆ ನೀಡಿ ಬಳಿಕ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ನೀಡಲು ತೀರ್ಮಾನಿಸಲಾಗಿದೆ.

ಓದಿ:ದಾವಣಗೆರೆ : ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ

ABOUT THE AUTHOR

...view details