ಕರ್ನಾಟಕ

karnataka

ETV Bharat / state

ಮತದಾರರ ಪಟ್ಟಿ ಪರಿಷ್ಕರಣೆಯ ಜಾಗೃತಿಗಾಗಿ ವಾಕ್‌ಥಾನ್​.. - ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ

ಜಿಲ್ಲೆಯಲ್ಲಿ ಮತದಾರರ ಪರಿಷ್ಕರಣೆ ಸೆಪ್ಟೆಂಬರ್​ 1ರಿಂದ 15ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಜಾಗೃತಿ ಕಾರ್ಯಕ್ರಮ ನಡೆಯಿತು.

Walkathon for Awareness for Voter List Revision

By

Published : Sep 1, 2019, 11:01 PM IST

ಮಂಡ್ಯ: ಜಿಲ್ಲೆಯಲ್ಲಿ ಮತದಾರರ ಪರಿಷ್ಕರಣೆ ಸೆಪ್ಟೆಂಬರ್​ 1ರಿಂದ 15ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ವಾಕ್‌ಥಾನ್ ನಡೆಸಿತು.

ಜಿಲ್ಲಾಧಿಕಾರಿ ಕಚೇರಿಯಿಂದ ಮಹಾವೀರ ವೃತ್ತದವರೆಗೂ 2 ಕಿ.ಮೀ ವಾಕ್‌ಥಾನ್ ನಡೆಯಿತು. ಜಿಲ್ಲಾಧಿಕಾರಿ ವೆಂಕಟೇಶ್ ಅವರು ಜಾಥಾಗೆ ಚಾಲನೆ ಕೊಟ್ಟರು. ಜೊತೆಗೆ ಅವರೂ ವಾಕ್‌ಥಾನ್‌ನಲ್ಲಿ ಪಾಲ್ಗೊಂಡು ಕೊನೆವರೆಗೂ ಭಾಗವಹಿಸಿದ್ದರು.

ವಾಕ್‌ಥಾನ್​

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಪಟ್ಟಿಯಲ್ಲಿ ಕೈಬಿಟ್ಟು ಹೋದವರು, ವಿಳಾಸ ಬದಲಾವಣೆ, ಬೇರೆಡೆಗೆ ಮತದಾರರ ಹೆಸರು ವರ್ಗಾಯಿಸಲು ಬಯಸುವವರಿಗೂ ಪರಿಷ್ಕರಣೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಈ ಎಲ್ಲಾ ದೂರುಗಳು ಬಂದ ಹಿನ್ನೆಲೆ ಕ್ರಮ ಕೈಗೊಳ್ಳಲಾಗುತ್ತಿದೆ.

ABOUT THE AUTHOR

...view details