ಕರ್ನಾಟಕ

karnataka

ETV Bharat / state

'ಅಪರಿಚಿತರಿಗೆ ಪ್ರವೇಶವಿಲ್ಲ'... ಸ್ವಯಂ ಲಾಕ್​ಡೌನ್ ಹೇರಿಕೊಂಡ ಗ್ರಾಮಸ್ಥರು! - ಸ್ವಯಂ ಪ್ರೇರಣೆಯಿಂದ ಲಾಕ್​ಡೌನ್

ಮಳವಳ್ಳಿ ತಾಲೂಕಿನ ಜೆ.ಸಿ.ಪುರ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಲಾಕ್​ಡೌನ್ ಮಾಡಿಕೊಂಡಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಟ್ಟಿದ್ದಾರೆ.

Mandya
ಜೆ.ಸಿ ಪುರ ಗ್ರಾಮ

By

Published : Jul 2, 2020, 5:56 PM IST

ಮಂಡ್ಯ:ಕೊರೊನಾ ತಡೆಗಟ್ಟಲು ಮಳವಳ್ಳಿ ತಾಲೂಕಿನ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಲಾಕ್​ಡೌನ್​ಗೆ ಮುಂದಾಗಿದ್ದಾರೆ. ಅಪರಿಚಿತರಿಗೆ ಗ್ರಾಮಕ್ಕೆ ಪ್ರವೇಶ ನಿರ್ಬಂಧಿಸಿ ಸ್ವಯಂ ಪ್ರೇರಿತವಾಗಿ ಲಾಕ್​ಡೌನ್ ಹೇರಿಕೊಂಡಿದ್ದಾರೆ.

ಸ್ವಯಂ ಲಾಕ್​ಡೌನ್ ಹೇರಿಕೊಂಡ ಗ್ರಾಮಸ್ಥರು

ಮಳವಳ್ಳಿ ತಾಲೂಕಿನ ಜೆ.ಸಿ.ಪುರ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಲಾಕ್​ಡೌನ್ ಮಾಡಿಕೊಂಡಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಗ್ರಾಮಕ್ಕೆ ವ್ಯಾಪಾರಿಗಳು ಸೇರಿದಂತೆ ಯಾರೇ ಅಪರಿಚಿತರಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕಿ ಎಚ್ಚರಿಕೆ ನೀಡಿದ್ದಾರೆ.

ಗ್ರಾಮದಲ್ಲಿನ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಜೊತೆಗೆ ವ್ಯಪಾರ ವಹಿವಾಟಿಗೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಗ್ರಾಮದ ಮುಖಂಡರು ಈ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ಪ್ರಮುಖ ರಸ್ತೆಗಳಲ್ಲಿ ಯುವಕರನ್ನು ಕಾವಲು ಬಿಡಲಾಗಿದೆ. ಗ್ರಾಮಕ್ಕೆ ಯಾರೇ ಅಪರಿಚಿತ ವ್ಯಕ್ತಿಗಳು ಆಗಮಿಸಿದರೂ ಎಚ್ಚರಿಕೆ ನೀಡಲಾಗುತ್ತಿದೆ. ವ್ಯಾಪಾರಿಗಳ ವ್ಯಾಪಾರಕ್ಕೂ ಅವಕಾಶ ನೀಡಿಲ್ಲ. ಗ್ರಾಮಸ್ಥರು ಹೊರ ಹೋಗಲಿ, ಬರಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಹೀಗೆ ಗ್ರಾಮಸ್ಥರು ಮುನ್ನೆಚ್ಚರಿಕೆ ವಹಿಸಿದ್ದಾರೆ.

ABOUT THE AUTHOR

...view details