ಮಂಡ್ಯ:ಗ್ರಾಮದ ಒಳಗೆ ಬರಲೇಬೇಕು, ಇಲ್ಲವಾದರೆ ನಿಖಿಲ್ ಪರ ಮತ ಹಾಕ್ತೀವಿ ಅಂತ ಅಭಿಮಾನಿಗಳು ದರ್ಶನ್‌ರನ್ನು ಗ್ರಾಮದ ಒಳಗೆ ಕರೆಸಿಕೊಂಡ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೊಕ್ಕರೆ ಹುಂಡಿ ಗ್ರಾಮದಲ್ಲಿ ನಡೆದಿದೆ.
ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಆಗಮಿಸಿದ ದರ್ಶನ್‌ಗೆ ಗ್ರಾಮಸ್ಥರು ಒಳಗೆ ಬರುವಂತೆ ಬೇಡಿಕೆ ಇರಿಸಿದ್ದಾರೆ. ಈ ಸಂದರ್ಭದಲ್ಲಿ ಸಮಯದ ಅಭಾವದಿಂದ ಗ್ರಾಮಕ್ಕೆ ತೆರಳಲು ಸಾಧ್ಯವಿಲ್ಲಎಂದು ದರ್ಶನ್ ಹೇಳಿದಾಗ ಗ್ರಾಮಸ್ಥರು ಅಸಮಾಧಾನಗೊಂಡರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ನಟ ದರ್ಶನ್ ದರ್ಶನ್ ತಮ್ಮೂರಿಗೆ ಬರದಿದ್ರೆ ಸುಮಲತಾಗೆ ವೋಟ್ ಹಾಕಲ್ಲ ಅಂದ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ನಿಖಿಲ್ಗೆ ವೋಟ್ ಹಾಕುವುದಾಗಿ ನಿಖಿಲ್ ಪರ ಗ್ರಾಮಸ್ಥರ ಜೈಕಾರ ಹಾಕಿದಾಗ ಅನಿವಾರ್ಯವಾಗಿ ಗ್ರಾಮದ ಒಳಗೆ ತೆರಳಿ ಮತಯಾಚನೆ ಮಾಡಿದರು.
ದರ್ಶನ್ ಬರುವ ಸುದ್ದಿಯಿಂದ ಸಂತಸಗೊಂಡು ಮೆರವಣಿಗೆ ಮೂಲಕ ಊರಿಗೆ ಕರೆದೊಯ್ದ ಅದ್ದೂರಿ ಸ್ವಾಗತ ಕೋರಿ, ಬೆಂಬಲ ನೀಡುವ ಭರವಸೆಯನ್ನು ಗ್ರಾಮಸ್ಥರು ನೀಡಿದರು.