ಮಂಡ್ಯ: ಶ್ರೀರಂಗಪಟ್ಟಣದ ಮಹದೇಪುರದಲ್ಲಿ ಮನಕುಲಕುವ ಘಟನೆಯೊಂದು ನಡೆದಿದೆ. ಕಾವೇರಿ ಜಲಾಶಯದಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರ ಬಿಟ್ಟಿರುವುದರಿಂದ ನದಿಯ ಪಕ್ಕದಲ್ಲೇ ಇದ್ದ ಸ್ಮಶಾನ ರಸ್ತೆ ಜಲಾವೃತವಾಗಿದ್ದು, ಗ್ರಾಮಸ್ಥರು ಪ್ರವಾಹದಲ್ಲೇ ಮೃತದೇಹ ಹೊತ್ತೊದ್ದಿದ್ದಾರೆ.
ನೀರಿನಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು: ನಿನ್ನೆ ಸಂಜೆ ಮಹದೇಪುರ ಗ್ರಾಮದ ಸುಮಲೋಚನ ಎಂಬ ಮಹಿಳೆ ಮೃತಪಟ್ಟಿದ್ದರು. ಏಕಾಏಕಿ ಕಾವೇರಿ ನದಿಯಲ್ಲಿ ಪ್ರವಾಹ ಬಂದು ಸ್ಮಶಾನದ ರಸ್ತೆ ಮುಳುಗಡೆ ಆಗಿರುವ ಕಾರಣ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಲು ಬೇರೆ ದಾರಿಯಿಲ್ಲದೆ ಪ್ರವಾಹದ ನೀರಿನಲ್ಲಿ ಹೊತ್ತೊಯ್ಯಲಾಗಿದೆ.