ಮಂಡ್ಯ:ವಿಧಾನಸಭೆ ಚುನಾವಣೆ ಹಿನ್ನೆಲೆ ಮಂಡ್ಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಜೆಡಿಎಸ್ ವಿರುದ್ಧ ಮಂಡ್ಯದಲ್ಲಿ ಮತ್ತೊಂದು ಸ್ವಾಭಿಮಾನ ಬಣದಿಂದ ಸ್ಪರ್ಧೆ ಎದುರಾಗಿದೆ. ನಿನ್ನೆ ಬಂಡಾಯ ಶಮನ ಮಾಡಲು ಭರ್ಜರಿ ಸರ್ಕಸ್ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಖಚಿತ ಮಾಡುವುದು ಖಚಿತ ಎಂದು ನಿನ್ನೆ ಬಂಡಾಯ ನಾಯಕರು ತಿಳಿಸಿದ್ದರು.
ಸೋಮವಾರ ನಡೆದ ಸಭೆಯಲ್ಲೂ ಕೂಡಾ ಮತ್ತೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತವೆಂದು ಮಾಜಿ ಸಚಿವ ಕೆ.ವಿ.ಶಂಕರೇಗೌಡರ ಮೊಮ್ಮಗ ಕೆ.ಎಸ್.ವಿಜಯಾನಂದ ತಿಳಿಸಿದ್ದಾರೆ. ಮನವೊಲಿಸಿದ ಹಿನ್ನೆಲೆ ಶ್ರೀನಿವಾಸ್ ಅಳಿಯ ಹೆಚ್.ಎನ್.ಯೋಗೇಶ್, ಮಹಾಲಿಂಗೇಗೌಡ ನಾಮಪತ್ರ ಹಿಂಪಡೆದರು. ಸ್ವಾಭಿಮಾನ ಬಣದ ಹೆಸರಿನಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಇಂದಿನ ಸಭೆಯಲ್ಲಿ ವಿಜಯನಂದಾ ಅವರ ಹೆಸರನ್ನು ಘೋಷಿಸಿದ ಎಂ ಶ್ರೀನಿವಾಸ್ ಜೆಡಿಎಸ್ ವಿರುದ್ಧ ಸಮರ ಸಾರಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಎಂ.ಶ್ರೀನಿವಾಸ್ ಅವರು, ವಿಜಯಾನಂದ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಅವರಿಗೆ ಬೆಂಬಲ ಕೊಟ್ಟು ಗೆಲ್ಲಿಸುವ ಕೆಲಸ ಮಾಡುತ್ತೇವೆ. ನಮಗೆ ಗೆಲುವು ಮುಖ್ಯ. ಸ್ವಾಭಿಮಾನ ಪಡೆ ಗೆಲುವು ಮತ್ತೊಮ್ಮೆ ಆಗಬೇಕು. ಜೆಡಿಎಸ್ ಅಭ್ಯರ್ಥಿಯನ್ನು ಹಾಕಿದ್ದಾರೆ. ಮತದಾರರು ನಮ್ಮ ಅಭ್ಯರ್ಥಿಗೆ ಮತ ಕೊಟ್ಟು ಗೆಲ್ಲಿಸಲು ಅವರು ಮನವಿ ಮಾಡಿದರು.
ಜಿಡಿಎಸ್ ಬಂಡಾಯ ಅಭ್ಯರ್ಥಿ ವಿಜಯಾನಂದ ಮಾತನಾಡಿ, ಶ್ರೀನಿವಾಸ್ ನೇತೃತ್ವದಲ್ಲಿ ಅಭ್ಯರ್ಥಿ ಆಗಿದ್ದೇನೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜನರ ಜೊತೆ ಹೋಗಿ ಪ್ರಚಾರ ಮಾಡುತ್ತೇವೆ. ನಮ್ಮ ತಾತಾ ವೈಯಕ್ತಿಕವಾಗಿ ಮಂಡ್ಯಕ್ಕೆ ಕೆಲಸ ಮಾಡಿದ್ದಾರೆ. ಜನರು ನನಗೆ ಮತ ನೀಡಿ ಆಶೀರ್ವಾದ ಮಾಡಿ. ಕೆ.ವಿ.ಶಂಕರೇಗೌಡರ ಕುಟುಂಬಕ್ಕೆ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು.