ಮಂಡ್ಯ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕುದುರೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ದೃಶ್ಯ ಮನಕಲಕುವಂತ್ತಿತ್ತು.
ಕುದುರೆಗೆ ವಾಹನ ಡಿಕ್ಕಿ: ರಕ್ತದ ಮಡುವಿನಲ್ಲಿ ಸಾವು- ಬದುಕಿನ ಹೋರಾಟ! - ಮಂಡ್ಯ ಅಪಘಾತ ಸುದ್ದಿ
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕುದುರೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ದೃಶ್ಯ ಮನಕಲಕುವಂತ್ತಿತ್ತು.

ಕುದುರೆಗೆ ವಾಹನ ಡಿಕ್ಕಿ
ನಗರದ ಹೃದಯ ಭಾಗದಲ್ಲೇ ಈ ಘಟನೆ ನಡೆದಿದೆ. ಈ ದುರಂತ ಸಂಭವಿಸಿ ದಿನ ಕಳೆದರೂ ನಗರಸಭೆ ಅಧಿಕಾರಿಗಳು ಮಾತ್ರ ಈ ಕಡೆ ತಿರುಗಿಯೂ ನೋಡಿಲ್ಲ. 15 ವರ್ಷದ ಕುದುರೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಕುದುರೆ ರಕ್ತದ ಮಡುವಿನಲ್ಲಿ ಸಾವು -ಬದುಕಿನ ನಡುವೆ ಹೋರಾಟ ಮಾಡುತ್ತಿದೆ.
ಕುದುರೆಗೆ ವಾಹನ ಡಿಕ್ಕಿ
ಈ ಕುದುರೆಗೆ ಡಿಕ್ಕಿ ಹೊಡೆದವರು ಯಾರು ಎಂಬುದು ತಿಳಿದುಬಂದಿಲ್ಲ. ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಕುದುರೆಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆಯಬೇಕು ಎಂದು ಮನವಿ ಮಾಡಿದ್ದಾರೆ.