ಮಂಡ್ಯ:ಡಾ.ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ 'ವೇದ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಪಾಂಡುಪುರದಲ್ಲಿ ನಿನ್ನೆ(ಭಾನುವಾರ) ನಡೆಯಿತು. ಪುನೀತೋತ್ಸವ ಕಾರ್ಯಕ್ರಮದಲ್ಲಿ ನಿರ್ದೇಶಕ ಹರ್ಷ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಬರೆದಿರುವ 'ಗಿಲಕ್ಕು ಶಿವ ಗಿಲ್ಲಕ್ಕೋ, ಗಿಲ ಗಿಲ ಗಿಲಕ್ಕೋ' ಎಂಬ ಹಾಡನ್ನು ಬಿಡುಗಡೆ ಮಾಡಲಾಯಿತು.
ಬಳಿಕ ವೇದಿಕೆಗೆ ಎಂಟ್ರಿಕೊಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ವೇದ ಚಿತ್ರದ ಕುರಿತು ಮಾತನಾಡಿದರು. ಈ ವೇಳೆ ನೆರದಿದ್ದ ಜನ ಅಪ್ಪು,ಅಪ್ಪು ಎಂದು ಕೂಗಿದರು. ಶಿವಣ್ಣ ಎದೆಗೆ ಕೈ ಒತ್ತಿಕೊಂಡು ಅಪ್ಪುಯಾವಾಗಲೂ ಹೃದಯದಲ್ಲಿ ಇರುತ್ತಾನೆ. ಅಪ್ಪು ಅಮಾರ ದಿಲ್ ಹೇ ಎಂದು ಭಾವುಕರಾದರು.