ಕರ್ನಾಟಕ

karnataka

ಶಿಕ್ಷಕರ ಮೇಲಿನ ಕೋಪಕ್ಕೆ ಶಾಲಾ ಮಕ್ಕಳು ಕುಡಿಯುವ ನೀರಿಗೆ ವಿಷ ಹಾಕಿದರಾ ಜೂಜುಕೋರರು?

By

Published : Jul 15, 2019, 11:02 PM IST

ತಾಲೂಕಿನ ಎ. ಹುಲ್ಲುಕೆರೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್​ಗೆ ದುಷ್ಕರ್ಮಿಗಳು ವಿಷ ಹಾಕಿದ್ದು, ಶಿಕ್ಷಕರ ಮೇಲಿನ ಕೋಪಕ್ಕೆ ಜೂಜುಕೋರರು ನೀರಿನ ಟ್ಯಾಂಕ್​ಗೆ ವಿಷ ಹಾಕಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯ

ಮಂಡ್ಯ:ಶಿಕ್ಷಕರ ಮೇಲಿನ ಕೋಪಕ್ಕೆ ಜೂಜುಕೋರರು ನೀರಿನ ಟ್ಯಾಂಕ್​ಗೆ ವಿಷ ಹಾಕಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಎ. ಹುಲ್ಲುಕೆರೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್​ಗೆ ದುಷ್ಕರ್ಮಿಗಳು ವಿಷ ಹಾಕಿದ್ದು, ಟ್ಯಾಂಕ್​ನಲ್ಲಿನ ನೀರಿನಿಂದ ಬಾಯಿ ಮುಕ್ಕಳಿಸಿದ್ದ 11 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಚಿಕಿತ್ಸೆಗೆ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ಶಿಕ್ಷಕರ ಮೇಲಿನ ಕೋಪಕ್ಕೆ ವಿಷ ಹಾಕಿದರಾ ಜೂಜುಕೋರರು?

ಈ ಬಗ್ಗೆ ಮಾಹಿತಿ ನೀಡಿರುವ ಶಾಲೆಯ ಮುಖ್ಯ ಶಿಕ್ಷಕರು, ಶಾಲೆ ಪ್ರಾರಂಭವಾಗಿ ಬೆಳಗಿನ ಹಾಲು ಕೊಡುವ ವೇಳೆಯಲ್ಲಿ ಟ್ಯಾಂಕ್​​ನಲ್ಲಿದ್ದ ನೀರಿನಿಂದ ಕೆಲವು ವಿದ್ಯಾರ್ಥಿಗಳು ಬಾಯಿ ಮುಕ್ಕಳಿದ್ದಾರೆ. ಈ ವೇಳೆ ಕೆಲವು ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.

ಬಳಿಕ ಶಾಲೆ ಬಿಟ್ಟ ನಂತರ ಹಿಂಭಾಗದಲ್ಲಿ ಕೆಲವು ಯುವಕರು ಜೂಜಾಡುತ್ತಿದ್ದರು. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರಿನ ನಂತರ ಶಿಕ್ಷಕರು ಮತ್ತು ಜೂಜಾಡುತ್ತಿದ್ದವರ ನಡುವೆ ವೈಮನಸ್ಸು ಉಂಟಾಗಿ ಹೀಗೆ ಮಾಡಿದ್ದಾರೆ ಎಂದು ಶಿಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ವೈಮನಸ್ಸು ವಿಷ ಹಾಕಲು ಕಾರಣ ಎನ್ನುತ್ತಿರುವ ಗ್ರಾಮಸ್ಥರು, ಸಮಗ್ರ ತನಿಖೆಗೆ ಒತ್ತಾಯ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಗ್ರಾಮಾಂತರ ಪೊಲೀಸರು ಜೂಜಾಡುತ್ತಿದ್ದವರ ಮಾಹಿತಿ ಕಲೆಹಾಕುತ್ತಿದ್ದು, ಸಂದರ್ಭ ಬಂದರೆ ವಶಕ್ಕೆ ಪಡೆದು ವಿಚಾರಣೆ ಮಾಡುವ ಸಾಧ್ಯತೆ ಇದೆ.

For All Latest Updates

TAGGED:

ABOUT THE AUTHOR

...view details