ಕರ್ನಾಟಕ

karnataka

ETV Bharat / state

ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣ.. ಮಂಡ್ಯದಲ್ಲಿ ಅನಧಿಕೃತ ಟ್ಯೂಷನ್ ಕೇಂದ್ರಗಳಿಗೆ ಬ್ರೇಕ್ - ಟ್ಯೂಷನ್ ಸೆಂಟರ್ ರದ್ದು

ಮಂಡ್ಯ ಜಿಲ್ಲೆಯಾದ್ಯಂತ ಅಕ್ರಮ ಟ್ಯೂಷನ್ ಸೆಂಟರ್ ಪತ್ತೆ ಮಾಡುವಂತೆ ಸೂಚಿಸಲಾಗಿದೆ. ಅನುಮತಿ ಪಡೆಯದೆ ಟ್ಯೂಷನ್ ನಡೆಸಿದರೆ ಪ್ರಕರಣ ದಾಖಲು ಮಾಡಲಾಗುವುದು- ಡಿಡಿಪಿಐ ಜವರೇಗೌಡ.

DDPI Javaregowda
ಡಿಡಿಪಿಐ ಜವರೇಗೌಡ

By

Published : Oct 18, 2022, 12:40 PM IST

ಮಂಡ್ಯ: ಜಿಲ್ಲೆಯಲ್ಲಿ ಅನಧಿಕೃತ ಟ್ಯೂಷನ್​​ಗಳನ್ನು ಕೂಡಲೇ ಬಂದ್ ಮಾಡಬೇಕು ಮತ್ತು ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಿಕ್ಷಕರು ಟ್ಯೂಷನ್ ಮಾಡಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಮಂಡ್ಯ ಡಿಡಿಪಿಐ (ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಉಪನಿರ್ದೇಶಕ) ಜವರೇಗೌಡರು ಎಚ್ಚರಿಕೆ ನೀಡಿದ್ದಾರೆ.

ಮಳವಳ್ಳಿ ಟ್ಯೂಷನ್​ಗೆ ಹೋದ ಬಾಲಕಿಯ ಮೇಲೆ ಅತ್ಯಾಚಾರ- ಹತ್ಯೆ ಪ್ರಕರಣ ಬೆನ್ನಲ್ಲೇ ಕೊನೆಗೂ ಎಚ್ಚೆತ್ತ ಶಿಕ್ಷಣ ಇಲಾಖೆ ಅನಧಿಕೃತ ಟ್ಯೂಷನ್​​ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅನುಮತಿ ಪಡೆಯದೆ ಟ್ಯೂಷನ್ ನಡೆಸಿದರೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಡಿಡಿಪಿಐ ಜವರೇಗೌಡ ಸುತ್ತೋಲೆ ಹೊರಡಿಸಿದ್ದಾರೆ.

ಮಂಡ್ಯದಲ್ಲಿ ಅನಧಿಕೃತ ಟ್ಯೂಷನ್ ಕೇಂದ್ರ ರದ್ದು: ಡಿಡಿಪಿಐ ಜವರೇಗೌಡ

ಇದನ್ನೂ ಓದಿ:ಮಂಡ್ಯ: ಟ್ಯೂಷನ್​ಗೆ ಕರೆದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಮಾಡಿ ಸಂಪ್​ಗೆ ಎಸೆದ ಕಿರಾತಕ

ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಸಂಸ್ಥೆಯ ಮೇಲ್ವಿಚಾರಕನಿಂದಲೇ ನಡೆದಿದ್ದ ಪೈಶಾಚಿಕ ಕೃತ್ಯದ ನಂತರ ಬಿಇಓ ನೀಡಿದ ವರದಿ ಆಧರಿಸಿ ಅನಧಿಕೃತವಾಗಿ ನಡೆಯುತ್ತಿದ್ದ ಟ್ಯೂಷನ್ ಸೆಂಟರ್ ರದ್ದು ಮಾಡಲು ನಿರ್ಧರಿಸಲಾಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಅಕ್ರಮ ಟ್ಯೂಷನ್ ಸೆಂಟರ್ ಪತ್ತೆ ಮಾಡುವಂತೆ ಸೂಚಿಸಲಾಗಿದೆ. ಅನಧಿಕೃತ ಟ್ಯೂಷನ್ ಕಂಡು ಬಂದರೆ ಮತ್ತು ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಿಕ್ಷಕರು ಟ್ಯೂಷನ್ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು. ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಶಿಕ್ಷಣ ಇಲಾಖೆ ಎಚ್ಚರ ವಹಿಸುತ್ತದೆ ಎಂದು ಡಿಡಿಪಿಐ ಜವರೇಗೌಡ ಹೇಳಿದರು.

ಇದನ್ನೂ ಓದಿ:ಮಳವಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣ: ಶವವಿಟ್ಟು ಪ್ರತಿಭಟನೆ

ABOUT THE AUTHOR

...view details