ಮಂಡ್ಯ :ದೀಪಾವಳಿ ಹಬ್ಬಕ್ಕೆಂದು ಸ್ಟುಡಿಯೋ ಸ್ವಚ್ಛಗೊಳಿಸುವ ಸಂದರ್ಭ ವಿದ್ಯುತ್ ಶಾಕ್ನಿಂದಾಗಿ ಇಬ್ಬರು ಛಾಯಾಗ್ರಾಹಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಘಟನೆ ನಡೆದಿದೆ. ಮೃತರನ್ನು ಲಕ್ಷ್ಮೀ ಸ್ಟುಡಿಯೋ ಮಾಲೀಕ ಎಂ.ವಿವೇಕ್ ಮತ್ತು ಛಾಯಾಗ್ರಾಹಕ ಎಸ್.ಮಧುಸೂಧನ್ ಎಂದು ಗುರುತಿಸಲಾಗಿದೆ.
ದೀಪಾವಳಿ ಹಬ್ಬಕ್ಕೆಂದು ಸ್ಟುಡಿಯೋ ಶುಚಿಗೊಳಿಸುವ ಸಂದರ್ಭ ಬಿಲ್ಡಿಂಗ್ ಮೇಲಿನ ಬೋರ್ಡ್ ತೆರವುಗೊಳಿಸುವ ವೇಳೆ ಪಕ್ಕದಲ್ಲೇ ಹಾದು ಹೋಗಿದ್ದ 11ಕೆ.ವಿ. ವಿದ್ಯುತ್ ತಂತಿ ಮಧುಸೂಧನ್ ಅವರಿಗೆ ತಗುಲಿದೆ. ಈ ಸಂದರ್ಭ ಮಧುಸೂದನ್ ಅವರನ್ನು ರಕ್ಷಿಸಲು ಹೋದ ವಿವೇಕ್ ಕೂಡ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.