ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಇಬ್ಬರ ಕೊಲೆ: ಮತ್ತೊಬ್ಬ ಆಸ್ಪತ್ರೆಗೆ ದಾಖಲು - ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ

ಕುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಇಬ್ಬರ ಬರ್ಬರ ಹತ್ಯೆ ಮಾಡಿದ ಘಟನೆ ಪಾಂಡವಪುರ ತಾಲೂಕಿನ‌ ಮಹದೇಶ್ವರಪುರ ಗ್ರಾಮದಲ್ಲಿ ನಡೆದಿದೆ.

two murdered in mandya
ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ

By

Published : Feb 22, 2020, 10:17 AM IST

ಮಂಡ್ಯ: ಕುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಇಬ್ಬರ ಬರ್ಬರ ಹತ್ಯೆ ಮಾಡಿದ ಘಟನೆ ಪಾಂಡವಪುರ ತಾಲೂಕಿನ‌ ಮಹದೇಶ್ವರಪುರ ಗ್ರಾಮದಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ

ಮಹದೇಶ್ವರಪುರ ಗ್ರಾಮದ ಸುರೇಶ್ (36) ಮತ್ತು‌ ನಾಗರಾಜು ನಾಗರಾಜು (40) ಕೊಲೆಯಾದ ದುರ್ದೈವಿಗಳಾಗಿದ್ದು, ಅದೇ ಗ್ರಾಮದ ಕೃಷ್ಣ ಮತ್ತು ಸಹಚರರಿಂದ ಈ ಕೃತ್ಯ ನಡೆದಿದೆ. ಸ್ಥಳಕ್ಕೆ ಪಾಂಡವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕೊಲೆಗೈದ ತಂಡದ ಪ್ರಮುಖ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದ್ದು, ಪ್ರಕರಣ ಕುರಿತು ಪಾಂಡವಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯುವಕನಿಗೆ ಚಾಕು ಇರಿತ:

ಯುವಕರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಓರ್ವ ಯುವಕ ಚಾಕು ಇರಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮದ್ದೂರು ತಾಲೂಕಿನ ಹನುಮಂತನಗರದ ಆತ್ಮಲಿಂಗೇಶ್ವರ ದೇವಾಲಯದ ಬಳಿ ತಡರಾತ್ರಿ ನಡೆದಿದೆ. ದೇವೇಗೌಡನ ದೊಡ್ಡ ಗ್ರಾಮದ ಸಚಿನ್ ಮತ್ತು ಅಭಿಷೇಕ್ ನಡುವೆ ಪೂಜೆ ವಿಚಾರದಲ್ಲಿ ಗಲಾಟೆ ನಡೆದು ಘಟನೆಯಲ್ಲಿ ಅಭಿಷೇಕ್ ಎಂಬಾತ ಸಚಿನ್‌ಗೆ ಚಾಕು ಇರಿದು ಗಾಯಗೊಳಿಸಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ

ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡ ಸಚಿನ್ ಮಾದೇಗೌಡ ಆಸ್ಪತ್ರೆಗೆ ದಾಖಲಾಗಿದ್ದು, ಚಾಕು ಇರಿದ ಅಭಿಷೇಕ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೆ.ಎಂ.ದೊಡ್ಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ‌ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details