ಮಂಡ್ಯ:ಜಮೀನಿನಲ್ಲಿ ಮೇಯುತ್ತಿದ್ದ ಎರಡು ಮೇಕೆಯನ್ನು ಚಿರತೆ ಎಳೆದೊಯ್ದು ಬಲಿ ಪಡೆದ ಘಟನೆ ಮದ್ದೂರು ತಾಲೂಕಿನ ಅರೆ ತಿಪ್ಪೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಚಿರತೆ ದಾಳಿಗೆ ಎರಡು ಮೇಕೆ ಬಲಿ - ಚಿರತೆ ದಾಳಿಯಿಂದ ಎರಡು ಮೇಕೆ ಸಾವು
ಜಿಲ್ಲೆಯಲ್ಲಿ ದಿನೇ ದಿನೆ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ಜಮೀನಿನಲ್ಲಿ ಮೇಯುತ್ತಿದ್ದ ಎರಡು ಮೇಕೆಗಳನ್ನು ಚಿರತೆ ಎಳೆದೊಯ್ದು ಕೊಂದು ಹಾಕಿದೆ.
goat
ರೈತ ಎ.ಜಿ.ರವಿ ಎಂಬುವವರಿಗೆ ಸೇರಿದ ಮೇಕೆಗಳು ಜಮೀನಿನ ಬಳಿ ಮೇಯುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಚಿರತೆ, ಎರಡು ಮೇಕೆಗಳನ್ನು ಎಳೆದೊಯ್ಯಲು ಪ್ರಯತ್ನಿಸಿ ಕೊಂದು ಹಾಕಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.