ಮಂಡ್ಯ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಟಗರು, ಕುರಿಗಳ ವ್ಯಾಪಾರ ಜೋರಾಗಿದೆ. ಮಂಡ್ಯದಲ್ಲಿ ಗ್ರಾಹಕರೊಬ್ಬರು ಬರೋಬ್ಬರಿ 1.25 ಲಕ್ಷ ರೂ.ಗೆ ಎರಡು ಬಂಡೂರು ತಳಿಯ ಟಗರು ಖರೀದಿಸಿ, ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಮಂಡ್ಯ ತಾಲೂಕಿನ ಸೂನಗನಹಳ್ಳಿ ಗ್ರಾಮದ ರೈತ ಶಂಭು ಎಂಬುವವರು ಸಾಕಿದ್ದ ಜೋಡಿ ಟಗರುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಕಳೆದ ಒಂದು ವರ್ಷದಿಂದ ಸಾಕಿದ್ದ ಟಗರುಗಳನ್ನು ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬುದ್ದೀನ್ ಎಂಬುವವರು 1 ಲಕ್ಷದ 25 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಟಗರುಗಳು ತಲಾ 80 ಕೆಜಿ ತೂಕದ್ದಾಗಿವೆ.