ಮಂಡ್ಯ:ಇಲ್ಲಿನ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ನಿಜವಾಗಿಯೂ ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಹಾಕಿಕೊಂಡರಾ? ಎಂಬ ಅನುಮಾನ ಈಗ ಮೂಡುತ್ತಿದೆ. ಇವರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಹಲವು ದಿನಗಳಿಂದ ಪ್ಲಾನ್ ನಡೆದಿತ್ತಂತೆ. ಈ ವ್ಯಾಪಾರಿಯ ಜೊತೆಗೆ ಲಾಡ್ಜ್‌ನಲ್ಲಿ ಕಾಣಿಸಿಕೊಂಡ ಯುವತಿಯೂ ಕೂಡ ಸಲ್ಮಾ ಭಾನು ಆಂಡ್ ಟೀಂನ ಸದಸ್ಯೆ. ಆ ಯುವತಿಯ ಮೂಲಕವೇ ಜಗನ್ನಾಥ್ ಶೆಟ್ಟಿಗೆ ಖೆಡ್ಡಾ ತೋಡಿದ್ದಾರೆ ಎಂಬುದು ಲೇಟೆಸ್ಟ್ ವಿಚಾರ.
ಪ್ರಕರಣದ ಸಂಪೂರ್ಣ ವಿವರ:ಫೋನ್ ಮೂಲಕ ಯುವತಿ ಜಗನ್ನಾಥ್ ಶೆಟ್ಟಿ ಅವರ ಸ್ನೇಹ ಸಂಪಾದಿಸಿದ್ದಳು. ಯುವತಿಗೆ ತಾನು ಲೆಕ್ಚರರ್ ಎಂದು ಜಗನ್ನಾಥ್ ಶೆಟ್ಟಿ ಹೇಳಿಕೊಂಡಿದ್ದರು. ಶೆಟ್ಟಿ ಹೇಳಿದ್ದ ಸುಳ್ಳನ್ನೇ ಈ ಗ್ಯಾಂಗ್ ತಮ್ಮ ಬಂಡವಾಳವಾಗಿ ಮಾಡಿಕೊಂಡಿದೆ. ಅವರ ಹಿನ್ನೆಲೆ ಗೊತ್ತೇ ಇಲ್ಲ ಎನ್ನುವಂತೆ ನಾಜುಕಾಗಿ ಮಾತನಾಡಿ ಯುವತಿ ನಾಟಕವಾಡಿ ಆತನನ್ನು ಲಾಕ್ ಮಾಡಿದ್ದಾಳೆ.
ಇದನ್ನೂ ಓದಿ:ಹನಿಟ್ರ್ಯಾಪ್ ಸುಳಿಗೆ ಸಿಲುಕಿದ ಪ್ರತಿಷ್ಠಿತ ಚಿನ್ನದ ವ್ಯಾಪಾರಿ: ಆರು ತಿಂಗಳ ಬಳಿಕ ದೂರು ದಾಖಲು
ಯುವತಿಯ ಜೊತೆಗೆ ಸಲುಗೆ ಬೆಳೆಯುತ್ತಿದ್ದಂತೆ ಜಗನ್ನಾಥ್ ಶೆಟ್ಟಿ ಲಾಡ್ಜ್ಗೆ ಕರೆದಿದ್ದರು. ಶೆಟ್ಟಿ ಆಹ್ವಾನದ ಬಳಿಕ ಆತನನ್ನು ಲಾಡ್ಜ್‌ನಲ್ಲಿ ಲಾಕ್ ಮಾಡಲು ಪ್ಲಾನ್ ನಡೆದಿತ್ತು. ಯುವತಿ ರೂಂಗೆ ಹೋದ ಕೆಲವೇ ಕ್ಷಣಗಳಲ್ಲಿ ಸಲ್ಮಾ ಮತ್ತು ಟೀಂ ಎಂಟ್ರಿಕೊಟ್ಟಿದೆ. ನಂತರ ವ್ಯಕ್ತಿಯೋರ್ವ ಅವನ್ಯಾರು ಹೇಳು?, ಇಲ್ಲಿಗೆ ಏಕೆ ಬಂದೆ? ಎಂದೆಲ್ಲೂ ಪ್ರಶ್ನಿಸಿದಾಗ, "ಫ್ರೆಂಡ್ ಮನೆಗೆ ಅಂತ ಹೇಳಿ ಇಲ್ಲಿಗೆ ಬಂದೆ, ಟ್ಯೂಷನ್ ಮುಗಿಸಿ ವಾಪಸ್ ಹೋಗುತ್ತೇನೆ. ಅವರು ನಮ್ಮ ಲೆಕ್ಚರರ್, ಅವರಿಗೆ ಏನೂ ಮಾಡಬೇಡಿ ಚಿಕ್ಕಪ್ಪ, ಚಿಕ್ಕಪ್ಪ" ಎಂದು ಶೆಟ್ಟಿ ಮುಂದೆ ಯುವತಿ ನಾಟಕೀಯವಾಗಿ ಅಲವತ್ತುಕೊಂಡಿದ್ದಾಳೆ.
ಜಗನ್ನಾಥ್ ಶೆಟ್ಟಿಗೆ ಹಲ್ಲೆ ನಡೆಸಲು ಮುಂದಾದಾಗ ತಡೆದು ತನ್ನ ಮೇಲೆ ಅನುಕಂಪ ಬರುವಂತೆ ಮಾಡಿದ್ದಾಳೆ. ಜೊತೆಗೆ, ವ್ಯಕ್ತಿ ಯುವತಿಗೆ ಹೊಡೆದು, ಗದರಿಸಿ ಶೆಟ್ಟಿಗೆ ನಂಬಿಕೆ ಬರುವಂತೆ ನಟಿಸಿದ್ದ. ಯುವತಿ ಚಿಕ್ಕಪ್ಪ ಎಂದು ನಟಿಸಿ ಜಗನ್ನಾಥ ಶೆಟ್ಟಿಯನ್ನು ಗ್ಯಾಂಗ್ ಲಾಕ್ ಮಾಡಿದ್ದಲ್ಲದೇ ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಹಣಕ್ಕಾಗಿ ಜಗನ್ನಾಥ್ ಶೆಟ್ಟಿ ಬಳಿ ಬೇಡಿಕೆ ಇಟ್ಟಿದೆ.
ಇದರಿಂದ ಭಯಭೀತನಾದ ಜಗನ್ನಾಥ್ ಶೆಟ್ಟಿ ಲಕ್ಷ, ಲಕ್ಷ ಹಣವನ್ನು ಗ್ಯಾಂಗ್‍ಗೆ ನೀಡಿದ್ದಾರೆ. ಆದರೆ ಎಷ್ಟೇ ಹಣ ಕೊಟ್ಟರೂ ಇವರ ಹಾವಳಿ ನಿಲ್ಲದೇ ಇದ್ದಾಗ ಪೊಲೀಸರ ಮೊರೆ ಹೋಗಿದ್ದಾರೆ. ಫೆ. 26ರಂದು ಈ ಘಟನೆ ನಡೆದಿತ್ತು. ಆ.19 ರಂದು ಅಪಹರಣ ಮತ್ತು ಬ್ಲಾಕ್ ಮೇಲ್ ದೂರನ್ನು ಅವರು ನೀಡಿದ್ದರು.
ಇದನ್ನೂ ಓದಿ:ಬಿಜೆಪಿ ಮುಖಂಡನ ಹನಿ ಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆಡಿಯೋ, ವಿಡಿಯೋ ವೈರಲ್