ಮಂಡ್ಯ: ವೃದ್ಧೆಯನ್ನು ವಂಚಿಸಿ ಹಣ ದೋಚಲು ಯತ್ನಿಸಿದ ಯುವಕನನ್ನು ಆಕೆಯೇ ಸೆರೆಹಿಡಿದು ಧರ್ಮದೇಟು ನೀಡಿದ ಘಟನೆ ಕೆ.ಆರ್.ರಸ್ತೆಯ ಕೆನರಾ ಬ್ಯಾಂಕ್ ಬಳಿ ನಡೆದಿದೆ.
ವೃದ್ಧೆಗೆ ವಂಚಿಸಿ ಹಣ ಎಗರಿಸಲು ಯತ್ನ: ಖದೀಮನಿಗೆ ಬಿತ್ತು ಧರ್ಮದೇಟು - ಮಂಡ್ಯ ಅಪರಾಧ ಸುದ್ದಿ
ವೃದ್ಧೆಯೊಬ್ಬರಿಗೆ ಮೋಸ ಮಾಡಿ ಹಣ ದೋಚಲು ಯತ್ನಿಸಿದ ಖದೀಮನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಶಂಕರ್ ನಗರ ನಿವಾಸಿ ಕಮಲಮ್ಮ ವಂಚಕನನ್ನು ಹಿಡಿದ ವೃದ್ದೆ. ಈಕೆ ನಗರದ ಲಕ್ಷ್ಮಿ ಜನಾರ್ಧನ ಶಾಲೆಯ ಮುಂಭಾಗ ಬ್ಯಾಂಕ್ ಬಳಿ ಧರ್ಮಸ್ಥಳ ಸಂಘದ ಹಣವನ್ನು ಡ್ರಾ ಮಾಡಿದ್ದಾರೆ. ಈ ವೇಳೆ ಬ್ಯಾಂಕ್ ಮುಂದೆ ಕುಳಿತು ಹಣವನ್ನ ಪರಿಶೀಲಿಸುತ್ತಿರುವ ಸಮಯದಲ್ಲಿ ಮಹರಾಷ್ಟ್ರ ಮೂಲದ ಅನಿಲ್ ಎಂಬಾತ ವೃದ್ದೆಯನ್ನ ಗಮನಿಸಿದ್ದಾನೆ. ಬಳಿಕ ವೃದ್ಧೆ ಕಮಲಮ್ಮರಿಗೆ ನೀವು ಡ್ರಾ ಮಾಡಿದ ಹಣ ಸರಿಯಿಲ್ಲ ಅಂತ ತಿಳಿಸಿ ವೃದ್ದೆ ಬಳಿ ಇದ್ದ ಅಷ್ಟು ಹಣವನ್ನ ಎತ್ತುಕೊಂಡು ಪರಾರಿಯಾಗಲು ಮುಂದಾಗಿದ್ದಾನೆ. ಆದರೆ ಅಷ್ಟರಲ್ಲಿ ಎಚ್ಚೆತ್ತ ಕಮಲಮ್ಮ ಪರಾರಿಯಾಗುತ್ತಿದ್ದ ವಂಚಕ ಅನಿಲ್ನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಸಾರ್ವಜನಿಕರು ವೃದ್ದೆಗೆ ಸಹಾಯ ಮಾಡಿ, ವಂಚಕನಿಗೆ ಗೂಸಾ ನೀಡಿದ್ದಾರೆ.
ಇನ್ನು ವಂಚಕ ಅನಿಲ್ನನ್ನು ಮಂಡ್ಯ ಪಶ್ಚಿಮ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.